ADVERTISEMENT

ಜಾತಿ ಸಮೀಕ್ಷೆ | ಖಂಡ್ರೆ ಹೇಳಿಕೆ ಖಂಡನೀಯ: ಖೂಬಾ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 5:42 IST
Last Updated 12 ಸೆಪ್ಟೆಂಬರ್ 2025, 5:42 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್: ‘ಜಾತಿ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತರು ಯಾರೂ ಹಿಂದೂ ಎಂದು ಬರೆಸಬಾರದು’ ಎಂದು ಈಶ್ವರ ಖಂಡ್ರೆ ಹೇಳಿರುವುದು ಖಂಡನೀಯ’ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.‌

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ‘ಇಷ್ಟು ವರ್ಷ ಹಿಂದೂ ಎಂದು ಬರೆಯಿಸಿದಾಗ ಆಗದ ತೊಂದರೆ ಈಗ ಏಕೆ ಆಗುತ್ತಿದೆ ಎಂದು ಪ್ರಶ್ನಿಸಿದರು. ತಕ್ಷಣ ರಾಜ್ಯದ ಜನರಿಗೆ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

‘ವೀರಶೈವ ಲಿಂಗಾಯತರು ಹಿಂದೂ ಎಂದು ಬರೆಯಿಸಬೇಡಿ’ ಎನ್ನುವುದಕ್ಕೆ ನನ್ನ ಆಕ್ಷೇಪವಿದೆ, ಈಶ್ವರ ಖಂಡ್ರೆ ಇಂತಹ ಹೇಳಿಕೆ ನೀಡಿ ರಾಜಕೀಯ ಬೇಳೆ ಬೆಯಿಸಿಕೊಳ್ಳಲು, ಲಿಂಗಾಯತ–ವೀರಶೈವ ಲಿಂಗಾಯತರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮ್ಯನವರೂ ಇದನ್ನೇ ಮಾಡಿದ್ದರು. ಇವರ ಹೇಳಿಕೆಯಿಂದ ಹಿಂದೂ ಸಮಾಜವನ್ನು  ಅವಮಾನಿಸಿದಂತಾಗಿದೆ. ರಾಜ್ಯದ ಎಲ್ಲಾ ಹಿಂದೂ ಮುಖಂಡರು, ಬಿಜೆಪಿ ನಾಯಕರು, ಗುರುಗಳು, ಧರ್ಮ ಪ್ರಚಾರಕರು ಇದನ್ನು ಖಂಡಿಸಬೇಕು. ಹಿಂದೂಗಳನ್ನು ಒಗ್ಗೂಡಿಸುವ ಕೆಲಸ ಮಾಡಬೇಕು’ ಎಂದು ಕೋರಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.