ADVERTISEMENT

ಗ್ಯಾರಂಟಿ ಯೋಜನೆ ಸಮಿತಿಯಿಂದ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:53 IST
Last Updated 15 ಜುಲೈ 2025, 7:53 IST
ಹುಲಸೂರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು
ಹುಲಸೂರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು   

ಹುಲಸೂರ: ಶಕ್ತಿ ಯೋಜನೆ ಅಡಿ 500 ಕೋಟಿ ಮಹಿಳೆಯರು ಉಚಿತವಾಗಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡಿದ ಕಾರಣ ಪಟ್ಟಣದ ಭಾಲ್ಕಿ–ಬಸವಕಲ್ಯಾಣ ರಸ್ತೆಯಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪದಾಧಿಕಾರಿಗಳು ಸೋಮವಾರ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ವೇಳೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿದ್ರಾಮ ಕಾಮಣ್ಣ ಮಾತನಾಡಿ,‘ ಮಹಿಳೆಯರ ಕನಸು ನನಸು ಮಾಡಲಾಗಿದೆ. ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ’ ಎಂದರು.

ADVERTISEMENT

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಲತಾ ಹಾರಕೂಡೇ, ತಾಲ್ಲೂಕ ಪಂಚಾಯಿತಿ ಇಒ ಮಹಾದೇವ ಜಮ್ಮು, ಸಮಿತಿ ಸದಸ್ಯರಾದ ವೆಂಕಟೇಶ ಗುತ್ತಿಗೆದಾರ, ತ್ರಿಂಬಕ ಜೀವಾಯಿ, ವಿನಾಯಕ ಪವಾರ, ಈಶ್ವರ ಮೇತ್ರೆ, ಶಿವಕುಮಾರ ಕೋಳಿ, ಪ್ರಥಮ ಜಾಧವ, ಮುಕೇಶ್ ಪಾಟೀಲ, ಸುನಿಲ ಪಾಟೀಲ, ಮಹೇಶ ಪಾಟೀಲ, ಭಾಗವತ ಫುಂಡೆ ಸೇರಿ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.