
ಕಮಲನಗರ: ‘ಶಿಕ್ಷಣದ ಮಹತ್ವ ಅರಿತಿದ್ದ ಚನ್ನಬಸವ ಪಟ್ಟದ್ದೇವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ವಿದ್ಯಾಕೇಂದ್ರಗಳನ್ನು ತೆರೆಯುವ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದರು’ ಎಂದು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದ ಶಾಖಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಚನ್ನಬಸವ ಪಟ್ಟದ್ದೇವರ 136ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದ ಅವರು, ‘ಪಟ್ಟದ್ದೇವರ ಹುಟ್ಟೂರಲ್ಲಿ ಅವರ ಜಯಂತ್ಯುತ್ಸವ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ’ ಎಂದರು.
ಬಸವ ಬೆಳವಿ ಚರಂತೇಶ್ವರ ವಿರಕ್ತಮಠದ ಶರಣಬಸವ ಸ್ವಾಮೀಜಿ ಮಾತನಾಡಿ, ‘ಗಡಿಭಾಗದಲ್ಲಿ ಚನ್ನಬಸವ ಪಟ್ಟದ್ದೇವರು ಸಲ್ಲಿಸಿರುವ ಜನಪರ, ಜೀವಪರ, ಸಮಾಜಪರ ಸೇವೆ ಪ್ರೇರಣಾದಾಯಕ. ಶರಣ ಪಥದಲ್ಲಿ ಜೀವನ ಸಾಗಿಸಿದ ಮಹಾನ್ ಚೇತನ ಚನ್ನಬಸವ ಪಟ್ಟದ್ದೇವರು’ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ‘ವಚನ ಸಾಹಿತ್ಯದಲ್ಲಿರುವ ಮಾನವೀಯ ಮೌಲ್ಯಗಳು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅಂಧಶ್ರದ್ಧೆ, ಸ್ತ್ರೀ ಶೋಷಣೆ, ಭಯೋತ್ಪಾದಕತೆಯನ್ನು ಹೋಗಲಾಡಿಸಬಹುದು. ಶರಣರ ವಚನಗಳು ವಿಶ್ವದ ವಿಸ್ಮಯವಾಗಿವೆ’ ಎಂದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪಿಠಾಧಿಪತಿ ಗುರುಬಸವ ಪಟ್ಟದ್ದೇವರು, ಅನುಭವ ಮಂಟಪ ಸಂಚಾಲಕ ಶಿವಾನಂದ ಸ್ವಾಮೀಜಿ, ಖೇಡ್-ಸಂಗಮ ನೀಲಾಂಬಿಕಾ ಆಶ್ರಮದ ಮಹಾದೇವಮ್ಮ ತಾಯಿ, ಗ್ರಾ.ಪಂ ಅಧ್ಯಕ್ಷೆ ಸುಶೀಲಾ ಸಜ್ಜನ್, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ ಝುಲ್ಪೆ, ಪ್ರಕಾಶ ಟೊಣ್ಣೆ, ಚಂದ್ರಕಾಂತ ವೈಜಾಪುರೆ, ಲಿಂಗಾನಂದ ಮಹಾಜನ, ಪ್ರಭುರಾವ ಕಳಸೆ, ರಾಜಕುಮಾರ ಬಿರಾದಾರ, ಶಿವಾನಂದ ವಡ್ಡೆ, ಪ್ರವೀಣ ಪಾಟೀಲ್, ಸಂತೋಷ ಬಿರಾದಾರ, ಸುರೇಶ ಸೊಲ್ಲಾಪುರೆ, ಶಿವಶರಣಪ್ಪಾ ಚಿಕಮುರ್ಗೆ, ಮಲ್ಲಿಕಾರ್ಜುನ ದಾನಾ, ರಂಗರಾವ ಜಾಧವ ಇತರರಿದ್ದರು.
ಉದಗಿರ್ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಮೇಶ ಅಂಬರಖಾನೆ ಬಸವ ಗುರುಪೂಜೆ ನೆರವೇರಿಸಿದರು.
ಪ್ರಕಾಶ ಮಾನಕರಿ, ಅಶೋಕ ಶೇರೆ, ರವಿ ಕಾರಬಾರಿ, ಕಾಶಿನಾಥ ಬಾವಗೆ, ಸಿದ್ರಾಮಪ್ಪ ಬಿರಾದಾರ, ಶೇಷೆರಾವ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಚಿತ್ರಸಂತೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಂಜೀವಕುಮಾರ ಸಂಗಮೆ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಮಡಿವಾಳಪ್ಪ ಮಹಾಜನ ಸ್ವಾಗತಿಸಿದರು. ಉಮಾಕಾಂತ ಮಹಾಜನ ವಂದಿಸಿದರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.
ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ ನಿಮಿತ್ತ ಬಸವಲಿಂಗ ಪಟ್ಟದ್ದೇವರುಮ ಗುರುಬಸವ ಪಟ್ಟದ್ದೇವರನ್ನು ಸಾರೋಟಿ ಮೆರವಣಿಗೆ ಮಾಡಲಾಯಿತು. ಚನ್ನಬಸವ ಕಾಲೊನಿಯಿಂದ ಹಿರೇಮಠ ಸಂಸ್ಥಾನದ ಶಾಖಾ ಮಠದ ವರೆಗೆ ಮರವಣಿಗೆ ನಡೆಯಿತು. ಪಟ್ಟಣದ ನಿವಾಸಿಗಳು ತಮ್ಮ ಮನೆಯ ಮುಂಭಾಗದಲ್ಲಿ ರಂಗೋಲಿ ಹಾಕಿ ಚನ್ನಬಸವ ಪಟ್ಟದ್ದೇವರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು. ಮೆರವಣಿಗೆಯೂದ್ದಕ್ಕೂ ಕೋಲಾಟ ಮಹಿಳಾ ಸಂಘದವರಿಂದ ಭಜನೆ ಶಾಲಾ ಮಕ್ಕಳಿಂದ ಲೇಝಿಮ್ ಹಾಗೂ ನೃತ್ಯಕ್ಕೆ ಜನರ ಮೆಚ್ಚುಗೆ ವ್ಯಕ್ತವಾಯಿತು. ಪಟ್ಟಣ ಸೇರಿದಂತೆ ವಿವಿಧೆಡೆಯಿಂದ ಸಾವಿರಾರೂ ಸಂಖ್ಯೆಯಲ್ಲಿ ಬಸವ ಭಕ್ತರು ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಸಿಪಿಐ ಶ್ರೀಕಾಂತ ಅಲ್ಲಾಪೂರ ಅವರ ಮಾರ್ಗದರ್ಶನದಲ್ಲಿ ಪಿಎಸ್‍ಐ ಆಶಾ ರಾಠೋಡ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.