
ಹುಲಸೂರ: ‘ಗಡಿಭಾಗದ ಬಡವರು, ಅನಾಥರನ್ನು ಸಮಾಜಮುಖಿಗೊಳಿಸುವ ಮೂಲಕ ಜ್ಯಾತ್ಯತೀತ ವಿಚಾರಧಾರೆಯನ್ನು ಹುಟ್ಟುಹಾಕಿದವರು ಶತಾಯುಷಿ ಚನ್ನಬಸವ ಪಟ್ಟದೇವರು’ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಗುರು ಬಸವೇಶ್ವರ ಸಂಸ್ಥಾನ ಮಠದಲ್ಲಿ ಚನ್ನಬಸವ ಪಟ್ಟದೇವರ 136ನೇ ಜಯಂತಿ ಆಚರಣೆ ಅಂಗವಾಗಿ ಮಾತನಾಡಿದ ಅವರು, ‘ಗಡಿಭಾಗದಲ್ಲಿ ಅರಿವು ಮೂಡಿಸಲು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಆರಂಭಿಸುವ ಮೂಲಕ ಕನ್ನಡ ಭಾಷೆ ಉಳಿಸಿ ಬೆಳೆಸಿದರಲ್ಲದೆ, ಶಿಕ್ಷಣ ನೀಡುವ ಅರಿವು ಮೂಡಿಸುವ ಕೆಲಸ ಮಾಡಿದರು. ಅನಾಥಾಲಯ ಸ್ಥಾಪಿಸಿ, ಅನ್ನದಾಸೋಹ ಹಾಗೂ ಆಶ್ರಯ ನೀಡಿದರು. ಬಸವ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬಸವಕಲ್ಯಾಣದಲ್ಲಿ ಅನುಭವ ಮಂಟಪವನ್ನು ಸ್ವತಃ ಶ್ರೀಗಳು, ಕಲ್ಲು–ಮಣ್ಣು ಹೊತ್ತು ಪುನರ್ನಿರ್ಮಾಣ ಮಾಡಿದರು’ ಎಂದು ತಿಳಿಸಿದರು.
ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಅವರು, ಕನ್ನಡಾಂಬೆಯ ಹಾಗೂ ಚನ್ನಬಸವ ಪಟ್ಟದೇವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು.
ದೀಪಕ ಪಾಟೀಲ, ಶಿವರಾಜ ವೀರಣ್ಣನವರ, ಸಚಿನ್ ಕೌಟೆ, ರಾಜಕುಮಾರ ತೊಂಡಾರೆ, ಬಾಬುರಾವ ಗೌಡಗಾಂವೆ, ಗುರುನಾಥ ಕನ್ನಡೆ, ರಾಜಪ್ಪ ಮಂಗಾ, ರಮೇಶ ಭೋಪಳೆ, ನಾಗನಾಥ ತೊಗರಗೆ, ಚಂದ್ರಕಾಂತ ನಂಜವಾಡೆ, ಸೂರ್ಯಕಾಂತ ಶಿಲವಂತ, ಪ್ರೇಮ ಗೌಡಗಾಂವೆ ಸೇರಿ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.