ADVERTISEMENT

ಕಮಲನಗರ: 7 ಸಂತ್ರಸ್ತರಿಗೆ ಚೆಕ್ ವಿತರಣೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 2:47 IST
Last Updated 13 ಜುಲೈ 2022, 2:47 IST
ಕಮಲನಗರದ ಡಿಗ್ಗಿ ಗ್ರಾಮದ ಲಕ್ಷ್ಮಿಬಾಯಿ ಅವರಿಗೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ₹10 ಸಾವಿರ ಮೊತ್ತದ ಚೆಕ್ ನೀಡಿದರು. ಜಿ.ಪಂ ಸಿಇಒ ಶಿಲ್ಪಾ ಇದ್ದರು
ಕಮಲನಗರದ ಡಿಗ್ಗಿ ಗ್ರಾಮದ ಲಕ್ಷ್ಮಿಬಾಯಿ ಅವರಿಗೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ₹10 ಸಾವಿರ ಮೊತ್ತದ ಚೆಕ್ ನೀಡಿದರು. ಜಿ.ಪಂ ಸಿಇಒ ಶಿಲ್ಪಾ ಇದ್ದರು   

ಕಮಲನಗರ: ‘ಮಳೆಯಿಂದಾಗಿ ಹಾನಿ ಗೀಡಾದ ಮನೆಗಳ ಕುಟುಂಬಸ್ಥರಿಗೆ ಪರಿಹಾರ ನೀಡಲಾಗುತ್ತಿದೆ’ ಎಂದು ಜಿಲ್ಲಾಧಿ ಕಾರಿ ಗೋವಿಂದ ರೆಡ್ಡಿ ಹೇಳಿದರು.

ತಾಲ್ಲೂಕಿನ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ‘ಪ್ರಕೃತಿ ವಿಕೋಪ ಪರಿಹಾರದಡಿ ಮಳೆಯಿಂದ ಗೋಡೆ ಕುಸಿದ ಸಂತ್ರಸ್ತರಿಗೆ ₹ತಲಾ 10 ಸಾವಿರ ಪರಿಹಾರ ವಿತರಿಸಲಾಗಿದೆ’ಎಂದರು.

ಡಿಗ್ಗಿ ಗ್ರಾಮದ ಲಕ್ಷ್ಮಿಬಾಯಿ ಅನೀಲ, ವಂದನಾ ದತ್ತು, ಕಾಂತಾಬಾಯಿ ವಿಶಂಬರ, ಚಿಕ್ಕಮುರ್ಗ ಗ್ರಾಮದ ಸುನಂದಾ ಜ್ಞಾನೇಶ್ವರ ಅವರಿಗೆ ಚೆಕ್ ವಿತರಿಸಲಾಗಿದೆ. 14 ಮನೆಗಳಲ್ಲಿ ಉಳಿದ 7 ಮನೆಗಳ ಸಂತ್ರಸ್ತರಿಗೆ ಚೆಕ್ ವಿತರಿಸಲಾಗುವುದು ಎಂದು ತಹ ಶೀಲ್ದಾರ್ ರಮೇಶ ಪೆದ್ದೇ ತಿಳಿಸಿದರು.

ADVERTISEMENT

ಎಸ್‍ಪಿ ಡಿ. ಕಿಶೋರಬಾಬು, ಸಿಇಒ ಶಿಲ್ಪಾ, ‌ತಾಪಂ ಇಒ ಸೈಯದ್ ಫಜಲ್, ಎಡಿ ಹಣಮಂತರಾಯ ಕೌಟಗೆ, ಬಿಜೆಪಿ ಗ್ರಾಮ ಘಟಕ ಅಧ್ಯಕ್ಷ ಉಮಾಕಾಂತ ಹಿರೇಮಠ, ಮುಖಂಡ ಸಂಗಮನಾಥ ಬಿರಾದಾರ, ಕಂದಾಯ ನಿರೀಕ್ಷಕ ಸೋಮಶೇಖರ ಬಿರಾದಾರ, ಮಲ್ಲಿಕಾರ್ಜುನ, ಅಶ್ವೀನ ಪಾಟೀಲ, ಶಿವಕುಮಾರ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.