ADVERTISEMENT

ಚಿಣ್ಣರ ಪ್ರಗತಿ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 5:41 IST
Last Updated 4 ಆಗಸ್ಟ್ 2021, 5:41 IST
ಔರಾದ್ ತಾಲ್ಲೂಕಿನ ತುಳಜಾಪುರ ಗ್ರಾಮದಲ್ಲಿ ಮಂಗಳವಾರ ನಡೆದ ಚಿಣ್ಣರ ಪ್ರಗತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ರಿಯಾಜ್‍ಪಾಶಾ ಮಾತನಾಡಿದರು
ಔರಾದ್ ತಾಲ್ಲೂಕಿನ ತುಳಜಾಪುರ ಗ್ರಾಮದಲ್ಲಿ ಮಂಗಳವಾರ ನಡೆದ ಚಿಣ್ಣರ ಪ್ರಗತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ರಿಯಾಜ್‍ಪಾಶಾ ಮಾತನಾಡಿದರು   

ಔರಾದ್: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಕೇಂದ್ರದ ವತಿಯಿಂದ ತಾಲ್ಲೂಕಿನ ತುಳಜಾಪುರ ಗ್ರಾಮದಲ್ಲಿ ನಿರ್ಮಿಸಲಾದ ಚಿಣ್ಣರ ಪ್ರಗತಿ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಲಾಯಿತು.

ಸಾಮಾಜಿಕ ಕಾರ್ಯಕರ್ತ ರಿಯಾಜ್‍ಪಾಶಾ ಕೊಳ್ಳೂರ್ ಮಾತನಾಡಿ,‘6 ರಿಂದ 12 ವರ್ಷದ ಮಕ್ಕಳಿಗೆ ಅಕ್ಷರ ಜ್ಞಾನದ ಜತೆಗೆ ನೈತಿಕ ಮೌಲ್ಯ ಕಲಿಸಿಕೊಡುವ ನಿಟ್ಟಿನಲ್ಲಿ ಈ ಪ್ರಗತಿ ಕೇಂದ್ರ ಕೆಲಸ ಮಾಡಲಿದೆ’ ಎಂದರು.

‘ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಕೇಂದ್ರದ ವತಿಯಿಂದ ತಾಲ್ಲೂಕಿನ 128 ಗ್ರಾಮಗಳಲ್ಲಿ ಪ್ರಗತಿ ಕೇಂದ್ರ ಆರಂಭಿಸಿದ್ದಾರೆ. ಅದೇ ಊರಿನ ಮಹಿಳಾ ಸಂಪನ್ಮೂಲ ಶಿಕ್ಷಕಿಯನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಮಾನವ ಸಂಪನ್ಮೂಲ ಕೇಂದ್ರದ ಜಿಲ್ಲಾ ಸಂಚಾಲಕ ಪ್ರಶಾಂತ ಸಿಂಧೆ ಮಾತನಾಡಿದರು.

ತಾಲ್ಲೂಕು ಸಂಚಾಲಕ ಶಿವಕಾಂತ ರ್ಯಾಕಲೆ, ಗ್ರಾಮ ಪಂಚಾಯಿತಿ ಸದಸ್ಯೆ ಸುಧಾರಾಣಿ, ಪ್ರಗತಿ ಕೇಂದ್ರದ ಶಿಕ್ಷಕಿ ರಾಧಿಕಾ, ನಾಗರಾಜ ವಲ್ಲೆಪುರೆ, ವೈಜಿನಾಥ ವಲ್ಲೆಪುರೆ, ಚಂದ್ರಕಾಂತ ಬಿರಾದಾರ, ಕಾಶಿನಾಥ ವಲ್ಲೆಪುರೆ ಹಾಗೂ ಧನರಾಜ ವಲ್ಲೆಪುರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.