ADVERTISEMENT

ಬೀದರ್ | ಬಾಗಿದ ವಿದ್ಯುತ್ ಕಂಬಗಳು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 6:41 IST
Last Updated 12 ಆಗಸ್ಟ್ 2024, 6:41 IST
ಚಿಟಗುಪ್ಪ ಪಟ್ಟಣದ ಕೊರವಾರ್‌ ವಿದ್ಯುತ್‌ ಪರಿವರ್ತಕ ಹಲವು ವರ್ಷಗಳಿಂದ ಬಾಗಿರುವುದು
ಚಿಟಗುಪ್ಪ ಪಟ್ಟಣದ ಕೊರವಾರ್‌ ವಿದ್ಯುತ್‌ ಪರಿವರ್ತಕ ಹಲವು ವರ್ಷಗಳಿಂದ ಬಾಗಿರುವುದು   

ಚಿಟಗುಪ್ಪ: ಪಟ್ಟಣ ಸೇರಿ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಮೂರು ನಾಲ್ಕು ವರ್ಷಗಳಿಂದ ವಿದ್ಯುತ್‌ ಕಂಬಗಳು ಶಿಥಿಲಾವಸ್ಥೆಗೆ ತಲುಪಿವೆ.

ಪಟ್ಟಣ ಹೊರವಲಯದ ಕೊರವಾರ್ ತೋಟದಲ್ಲಿರುವ ವಿದ್ಯುತ್‌ ಪರಿವರ್ತಕ ಕಳೆದ ಐದು ವರ್ಷಗಳಿಂದ ಹಾಳಾಗಿದ್ದು ಸಂಪೂರ್ಣವಾಗಿ ಬಾಗಿದೆ ರೈತರಿಗೆ. ಜಾನುವಾರುಗಳಿಗೆ ಜೀವ ಭಯ ಕಾಡುತ್ತಿದೆ.

ತಾಲ್ಲೂಕಿನ ನಿರ್ಣಾ ಗ್ರಾಮದ ಹೊಲದ ಮಧ್ಯದಲ್ಲಿರುವ ವಿದ್ಯುತ್‌ ಕಂಬಗಳು ಬಾಗಿವೆ. ಎತ್ತುಗಳನ್ನು ಮೇಯಿಸುವಾಗ ಕೈಗೆ ತಗಲುವ ಸಾಧ್ಯತೆ ತೀರ ಹೆಚ್ಚಿದೆ.

ADVERTISEMENT

ತಾಲ್ಲೂಕಿನ ಉಡಬಾಳ ಗ್ರಾಮದಿಂದ ಮುಸ್ತರಿ ವಾಡಿ ಗ್ರಾಮಕ್ಕೆ ಹೋಗುವ ರಸ್ತೆ ಮಧ್ಯದಲ್ಲಿಯೇ ವಿದ್ಯುತ್‌ ಕಂಬ ಅಳವಡಿಸಲಾಗಿದೆ. ಇದು ಸಂಪೂರ್ಣ ಅವೈಜ್ಞಾನಿಕ ಕ್ರಮವಾಗಿದ್ದು ನಿತ್ಯ ರಾತ್ರಿ ಸಂಚರಿಸುವ ಬೈಕ್‌ ಸವಾರರಿಗೆ, ಆಟೊಗಳಿಗೆ ಕಂಬದಿಂದ ಅಪಾಯವಿದೆ. ಆಯತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದರೆ ಪ್ರಾಣ ಕಳೆದುಕೊಳ್ಳಬಹುದಾಗಿದೆ ಎಂದು ಸಮಾಜ ಸೇವಕ ಬಸವರಾಜ ಬನ್ನಳ್ಳಿ ತಿಳಿಸಿದ್ದಾರೆ.

ತಾಲ್ಲೂಕಿನ ಮದರಗಿ ಗ್ರಾಮದಿಂದ ಭವಾನಿ ನಗರಕ್ಕೆ ಹೋಗುವ ದಾರಿ ಮಧ್ಯದ ಹೊಲದಲ್ಲಿ ಹಾದು ಹೋದ ವಿದ್ಯುತ್‌ ತಂತಿಗೆ ಆಸರೆಯಾದ ಕಂಬ ಸಂಪೂರ್ಣ ತುಕ್ಕು ಹಿಡಿದಿದ್ದು ಕಬ್ಬಿಣ್ಣದ ಸಲಾಕೆಗಳು ಹಾಳಾಗಿವೆ. ಯಾವ ಕ್ಷಣ ಬಿಳುತ್ತದೆಯೋ ಎಂಬ ಸ್ಥಿತಿಯಲ್ಲಿದೆ. ವಿದ್ಯುತ್‌ ಕಂಬ ನೆಲಕ್ಕೆ ಬಾಗಿದಕ್ಕೆ ತಂತಿಗಳು ಜೋತು ಬಿದ್ದಿವೆ ಅದರ ಸುತ್ತಮುತ್ತ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತ ರಾಮು ರಾಠೋಡ್‌ ಆರೋಪಿಸಿದರು.

ನಿರ್ಣಾದ ಬಹುತೇಕ ತೋಟಗಳಲ್ಲಿ ಜೋತು ಬಿದ್ದ ತಂತಿಗಳು ಕಬ್ಬು ಬೆಳೆಗೆ ತಾಗಿ ಬೇಸಿಗೆಯಲ್ಲಿ ಬೆಳೆ ಸುಟ್ಟು ಭಸ್ಮವಾಗಿ ಅಪಾರ ಪ್ರಮಾಣದ ಆಸ್ತಿ ಹಾನಿ ಸಂಭವಿಸಿದೆ.

ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಳಾದ ಕಂಬಗಳ ಹಾಗೂ ಜೋತುಬಿದ್ದ ತಂತಿಗಳ ಬಗ್ಗೆ ಗಮನವೇ ಹರಿಸುತ್ತಿಲ್ಲ ವಿದ್ಯುತ್‌ ಜೊತೆ ಚೆಲ್ಲಾಟ ಆಡುವುದು ಅಪಾಯಕರವಾಗಿದ್ದು, ತಕ್ಷಣ ಎಚ್ಚೆತ್ತು ಸುಧಾರಣೆ ಕೈಗೊಂಡು ನಾಗರಿಕರ ಜೀವ ಉಳಿಸಬೇಕು ಎಂದು ರೈತ ಪ್ರಭಾಕರ್‌ ನುಡಿಯುತ್ತಾರೆ.

ಮದರಗಿ ಗ್ರಾಮ ದಿಂದ ಭವಾನಿ ನಗರ ತಾಂಡಕ್ಕೆ ಹೋಗುವ ರಸ್ತೆ ಮಧ್ಯದ ಹೊಲದಲ್ಲಿ ಶಿಥಿಲಾವಸ್ಥೆಗೆ ತಲುಪಿ ತುಕ್ಕು ಹಿಡಿದ ಸಲಾಕೆಗಳ ವಿದ್ಯುತ್‌ ಕಂಬ ಬಾಗಿರುವುದು
ಚಂದ್ರಶೇಖರ್‌ ಪಾಟೀಲ್‌

Quote - ಶಿಥಿಲಾವಸ್ಥೆ ತಲುಪಿರುವ ವಿದ್ಯುತ್‌ ಕಂಬಗಳಿಂದ ಅಪಾಯವಿದ್ದು ಜೆಸ್ಕಾಂ ಅಧಿಕಾರಿಗಳು ತಕ್ಷಣ ಹೊಸ ಕಂಬಗಳನ್ನು ಹಾಕಬೇಕು ಚಂದ್ರಶೇಖರ ಪಾಟೀಲ ನಿರ್ಣಾ

Quote - ಹೊಸ ಕಂಬ ಅಳವಡಿಸಲು ವಿಭಾಗೀಯ ಕಚೇರಿಯಿಂದ ನಿಗದಿತ ಬಜೆಟ್‌ ಮಂಜೂರಾಗಬೇಕಿದೆ. ಹಣ ಬಂದ ತಕ್ಷಣ ಹೊಸ ಕಂಬಗಳನ್ನು ಹಾಕಲಾಗುತ್ತದೆ ಅನೀಲಕುಮಾರ ಪಾಟೀಲ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜೆಸ್ಕಾಂ ಮನ್ನಾಎಖ್ಖೇಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.