
ಔರಾದ್: ಪಟ್ಟಣದ ನಾಲಂದಾ ಶಾಲೆ ಬಳಿ ಗುಡಿಸಲುವಾಸಿಗಳ ಜತೆ ಪಾಸ್ಟರ್ ಶಿವಕುಮಾರ ಅವರು ಕ್ರಿಸಮಸ್ ಆಚರಣೆ ಮಾಡುವ ವೇಳೆ ಅವರನ್ನು ಕೆಲವರು ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ.
ಅಖಿಲ ಭಾರತ ಕ್ರೈಸ್ತ ಮಹಾಸಭಾದ ಮುಖಂಡರು ಶುಕ್ರವಾರ ತಹಶೀಲ್ದಾರ್ ಮಹೇಶ ಪಾಟೀಲ ಅವರಿಗೆ ಈ ಕುರಿತು ಮನವಿಪತ್ರ ಸಲ್ಲಿಸಿದರು.
ಪಾಸ್ಟರ್ ಶಿವಕುಮಾರ ಅವರು ಗುಡಿಸಲುವಾಸಿಗಳ ಜತೆ ಕ್ರಿಸಮಸ್ ಆಚರಣೆ ವೇಳೆ ಕೆಲ ಯುವಕರು ಬಂದು ಇಲ್ಲಿ ಏಕೆ ಹಬ್ಬ ಆಚರಿಸುತ್ತಿದ್ದೀರಿ. ಇಲ್ಲಿಂದ ಹೋಗಿ ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಪಾಸ್ಟರ್ ಸೇರಿದಂತೆ ಕ್ರೈಸ್ತ ಸಮುದಾಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ರೀತಿ ದಬ್ಬಾಳಿಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ರತ್ನದೀಪ ಕಸ್ತೂರೆ, ಸ್ವಾಮಿದಾಸ, ಸುನೀಲ ಮಿತ್ರಾ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.