ADVERTISEMENT

ಯೇಸುವಿನ ಸಂದೇಶಗಳನ್ನು ಪಾಲಿಸಿ :ಶಾಸಕ ರಾಜಶೇಖರ ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 11:18 IST
Last Updated 26 ಡಿಸೆಂಬರ್ 2019, 11:18 IST
ಹುಮನಾಬಾದ್‍ನ ಹಳ್ಳಿಖೇಡ(ಬಿ) ಪಟ್ಟಣದ ಮೆಥೋಡಿಸ್ಟ್ ಚರ್ಚ್‍ನಲ್ಲಿ ಬುಧವಾರ ಆಯೋಜಿಸಿದ್ದ ಯೇಸು ಕ್ರಿಸ್ತನ ಜನ್ಮದಿನಾಚರಣೆಯನ್ನು ಶಾಸಕ ರಾಜಶೇಖರ್ ಪಾಟೀಲ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದರು
ಹುಮನಾಬಾದ್‍ನ ಹಳ್ಳಿಖೇಡ(ಬಿ) ಪಟ್ಟಣದ ಮೆಥೋಡಿಸ್ಟ್ ಚರ್ಚ್‍ನಲ್ಲಿ ಬುಧವಾರ ಆಯೋಜಿಸಿದ್ದ ಯೇಸು ಕ್ರಿಸ್ತನ ಜನ್ಮದಿನಾಚರಣೆಯನ್ನು ಶಾಸಕ ರಾಜಶೇಖರ್ ಪಾಟೀಲ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದರು   

ಹುಮನಾಬಾದ್: ಯೇಸು ಕ್ರಿಸ್ತರು ವಿಶ್ವಕ್ಕೆ ಶಾಂತಿ, ಸಹಬಾಳ್ವೆಯ ಸೆಂದೇಶವನ್ನು ಸಾರಿದ್ದಾರೆ. ಯೇಸು ಹಾಕಿ ಕೊಟ್ಟಂತಹ ಮಾರ್ಗದರ್ಶನ, ತತ್ವ, ಸಿದ್ದಾಂತಗಳನ್ನು ಜೀವನದಲ್ಲಿ ಪಾಲಿಸಬೇಕು ಎಂದು ಶಾಸಕ ರಾಜಶೇಖರ್ ಪಾಟೀಲ ಸಲಹೆ ನೀಡಿದರು.

ತಾಲ್ಲೂಕಿನ ಹಳ್ಳಿಖೇಡ(ಬಿ) ಮೆಥೋಡಿಸ್ಟ್ ಚರ್ಚ್‍ನಲ್ಲಿ ಬುಧವಾರ ಕ್ರೈಸ್ತರು ಆಯೋಜಿಸಿದ್ದ ಕ್ರಿಸ್‍ಮಸ್ ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೈಸ್ತ ಸಮಾಜ ಶಾಂತಿ, ಸೌಹಾರ್ದತೆಗೆ ಹೆಸರುವಾಸಿಯಾಗಿದ್ದಾರೆ ಎಂದರು.

ADVERTISEMENT

ಪ್ರತಿಯೂಬ್ಬರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಸುಸಂಸ್ಕೃತರನ್ನಾಗಿ ಬೆಳೆಸಬೇಕು. ಸಮಾಜದ ಮತ್ತು ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಮೆಥೋಡಿಸ್ಟ್ ಚರ್ಚ್‍ನ ಪಾಸ್ಟರ್ ಪ್ರಾನ್ಸಿಸ್ ಜೈವಂತ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜಿಲ್ಲಾ ಪರಿಷತ ಮಾಜಿ ಸದಸ್ಯ ಕೇಶವರಾವ್ ತಳಘಟಕರ್, ಮುಖಂಡರಾದ ಮಹಾಂತಯ್ಯ ತೀರ್ಥ, ನಾಗರಾಜ ಹಿಬಾರೆ, ಯೂಸೂಫ್ ಸೌದಾಗರ, ಸುನಿಲ್ ಚಿಟ್ಟೆ, ರಾಜಶೇಖರ್ ಶಕೆ, ಅಶೋಕ ಹಾಲ, ವಿಜಯಕುಮಾರ ಚಿಟ್ಟೆ, ವಿಲ್ಸನ್ಬಲ್ಲೂರ್, ಜಾನ್ಸನ್ ಬಲ್ಲೂರ್, ಅಬ್ರಾಹಂ ಬೈರನಳ್ಳಿಕರ್, ಸ್ವಾಮಿದಾಸ್ ವಗ್ಗೆ, ಪವನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.