ADVERTISEMENT

ಭಾಲ್ಕಿ: ಸಂಭ್ರಮದ ಕ್ರಿಸ್ಮಸ್ ಹಬ್ಬದ ಆಚರಣೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 14:13 IST
Last Updated 25 ಡಿಸೆಂಬರ್ 2024, 14:13 IST
ಭಾಲ್ಕಿಯ ಫೇಥ್ ಎ ಜಿ ಚರ್ಚ್ ನಲ್ಲಿ ಕ್ರಿಸ್ಮಸ್ ಹಬ್ಬದ ನಿಮಿತ್ತ ಕ್ರಿಸ್ಮಸ್ ಕೇಕ್ ಕತ್ತರಿಸಿದರು
ಭಾಲ್ಕಿಯ ಫೇಥ್ ಎ ಜಿ ಚರ್ಚ್ ನಲ್ಲಿ ಕ್ರಿಸ್ಮಸ್ ಹಬ್ಬದ ನಿಮಿತ್ತ ಕ್ರಿಸ್ಮಸ್ ಕೇಕ್ ಕತ್ತರಿಸಿದರು   

ಭಾಲ್ಕಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಕ್ರೈಸ್ತರು ಬುಧವಾರ ಸಡಗರದಿಂದ ಕ್ರಿಸ್ಮಸ್ ಹಬ್ಬ ಆಚರಿಸಿದರು.

ತಾಲ್ಲೂಕಿನ ಎಲ್ಲ ಚರ್ಚ್‌ಗಳಲ್ಲಿ ಬಲಿಪೂಜೆ, ವಿಶೇಷ ಪ್ರಾರ್ಥನೆ, ಶಾಂತಿ ಸಂದೇಶ ಕಾರ್ಯಕ್ರಮಗಳು ನಡೆದವು. ಕ್ರೈಸ್ತರು ಚರ್ಚ್‌ಗಳಿಗೆ ಕುಟುಂಬದ ಸದಸ್ಯರೊಂದಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯ ಕೋರಿದರು.

ಪಟ್ಟಣದ ಫೇಥ್ ಎ ಜಿ ಚರ್ಚ್‌ನಲ್ಲಿ ದೈವಿಕ ಸಂದೇಶಕ ಪಾಸ್ಟರ್ ಅಶೋಕ್ ಹೈದರಾಬಾದ್ ಅವರು ಅಂತರಂಗದ ಸುದ್ದಿಯಿಂದ ಯೇಸುಕ್ರಿಸ್ತರನ್ನು ಹೃದಯದಲ್ಲಿ ಬರಮಾಡಿಕೊಳ್ಳುವುದರ ಮೂಲಕ ಸಂತೋಷ, ಸಂಭ್ರಮ ಹಂಚಿಕೊಳ್ಳುವ ಕುರಿತು ಸಂದೇಶ ಸಾರಿದರು. ವಿಶೇಷ ಪ್ರಾರ್ಥನೆಯನ್ನು ಪಾಸ್ಟರ್ ದಯಾನಂದ ಕಲಬುರಗಿ ನೆರವೇರಿಸಿಕೊಟ್ಟರು.

ADVERTISEMENT

ಸುವಾರ್ತಿಕ ಜೀವನ್ ಈ.ಬೇಂದ್ರೆ, ಬ್ರದರ್ ಧನರಾಜ, ಆರಾಧನೆ ತಂಡದ ಮಕ್ಕಳು ಆರಾಧನೆ ನಡೆಸಿಕೊಟ್ಟರು. ವಿಶೇಷ ಅತಿಥಿಗಳಾಗಿ ಪುರಸಭೆ ಸದಸ್ಯ ಅಶೋಕ ಗಾಯಕವಾಡ್, ಎನ್‌ಇಕೆಆರ್‌ಟಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ವೈದ್ಯರಾದ ಶೆಡೋಳೆ, ವಸಂತ ಪವಾರ್, ನಿತಿನ್ ಪಾಟೀಲ ಪ್ರಮುಖರಾದ ದೇವಿದಾಸ ರೇಷ್ಮೆ, ಸಚಿನ್ ಅಂಬೇಸಾಂಗವಿ, ರಮೇಶ, ರುಬಿನ್, ರಾಜಕುಮಾರ ಸೂರ್ಯವಂಶಿ ಇದ್ದರು. ಸಭಾ ಪಾಲಕ ಪಾಸ್ಟರ್ ರಾಜಕುಮಾರ್ ಬೋರಾಳೆ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.