ADVERTISEMENT

‘ಕ್ರೀಡೆಗಳಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 16:09 IST
Last Updated 12 ಸೆಪ್ಟೆಂಬರ್ 2024, 16:09 IST
ಭಾಲ್ಕಿಯ ನಿರ್ಮಲಾ ಕ್ರಿಯೇಟಿವ್ ಸ್ಟಡೀಸ್ ಕಾಲೇಜು ಅವರಣದಲ್ಲಿ ನಡೆದ ಹೋಬಳಿ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾ ಕೂಟಕ್ಕೆ ರಾಹುಲ್ ಗಾಯಕವಾಡ ಚಾಲನೆ ನೀಡಿದರು
ಭಾಲ್ಕಿಯ ನಿರ್ಮಲಾ ಕ್ರಿಯೇಟಿವ್ ಸ್ಟಡೀಸ್ ಕಾಲೇಜು ಅವರಣದಲ್ಲಿ ನಡೆದ ಹೋಬಳಿ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾ ಕೂಟಕ್ಕೆ ರಾಹುಲ್ ಗಾಯಕವಾಡ ಚಾಲನೆ ನೀಡಿದರು   

ಭಾಲ್ಕಿ: ಕ್ರೀಡೆಗಳಿಂದ ಆರೋಗ್ಯ ಸುಧಾರಿಸುತ್ತದೆ. ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಸಾಧ್ಯ ಎಂದು ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ರೋಹಿದಾಸ್ ರಾಠೋಡ್ ಹೇಳಿದರು.

ಪಟ್ಟಣದ ಹುಮನಾಬಾದ್ ರಸ್ತೆ ಹತ್ತಿರದ ನಿರ್ಮಲಾ ಕ್ರಿಯೇಟಿವ್ ಸ್ಟಡೀಸ್ ಕಾಲೇಜು ಆವರಣದಲ್ಲಿ ನಡೆದ ಪ್ರಸ್ತುತ ಸಾಲಿನ ಹೋಬಳಿ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಬರೀ ಓದಿಗಷ್ಟೇ ಸೀಮಿತವಾಗದೇ, ಕ್ರೀಡೆಗಳಲ್ಲಿಯೂ ಭಾಗವಹಿಸಿ. ಉತ್ತಮ ಆರೋಗ್ಯ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಶೈಕ್ಷಣಿಕ ಅವಧಿಗಳಲ್ಲಿ ಕ್ರೀಡೆಗೂ ಸಮಯ ನೀಡಲಾಗಿದೆ ಎಂದು ಹೇಳಿದರು.

ADVERTISEMENT

ಕನ್ನಡ ಭಾಗ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಹುಲ್ ಗಾಯಕವಾಡ ಕಾರ್ಯಕ್ರಮ ಉದ್ಘಾಟಿಸಿದರು. ರಾಜೀವ್‌ಗಾಂಧಿ ಸ್ಮಾರಕ ಪ್ರೌಢಶಾಲೆಯ ಮುಖ್ಯಶಿಕ್ಷಕ ಅನಿಲ್ ಕುಮಾರ್ ಗಾಯಕವಾಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಣ ಸಂಯೋಜಕ ಸಹದೇವ.ಜಿ, ಶಾರದಾ ಪಬ್ಲಿಕ್ ಶಾಲೆಯ ಅಧ್ಯಕ್ಷ ವಸಂತ ಪಾಟೀಲ, ಸಿಆರ್‍ಪಿ ಅಂಬ್ರೀಶ ಖಂಡ್ರೆ, ದೈಹಿಕ ಶಿಕ್ಷಕ ಚನ್ನವೀರ ಚಕ್ರಸಾಲಿ, ಮೈತ್ರಾದೇವಿ ಚಂದ್ರಕಾಂತ ಬಿರಾದಾರ, ಪ್ರಾಚಾರ್ಯ ಜಾಲಿಂದರ ಜಗನ್ನಾಥ ಮೇತ್ರೆ, ವಿಠಲರಾವ್ ಬಿರಾದಾರ, ಪ್ರತಾಪ ಕೋಣೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.