ADVERTISEMENT

ಉತ್ತಮ ಆರೋಗ್ಯಕ್ಕೆ ಸ್ವಚ್ಛತೆ ಅಗತ್ಯ: ಸತೀಶ ಬೆಳಕೋಟೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 14:53 IST
Last Updated 5 ಆಗಸ್ಟ್ 2021, 14:53 IST
ಬೀದರ್‌ನ ಸಪ್ತಗಿರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮದಲ್ಲಿ ನಾಗರಿಕರಿಗೆ ಸ್ವಚ್ಛತೆ ಪ್ರತಿಜ್ಞೆ ಬೋಧಿಸಲಾಯಿತು
ಬೀದರ್‌ನ ಸಪ್ತಗಿರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮದಲ್ಲಿ ನಾಗರಿಕರಿಗೆ ಸ್ವಚ್ಛತೆ ಪ್ರತಿಜ್ಞೆ ಬೋಧಿಸಲಾಯಿತು   

ಬೀದರ್: ಉತ್ತಮ ಆರೋಗ್ಯಕ್ಕೆ ಸುತ್ತಮುತ್ತಲಿನ ಪರಿಸರ ಶುಚಿಯಾಗಿ ಇಟ್ಟುಕೊಳ್ಳುವುದು ಅಗತ್ಯವಾಗಿದೆ ಎಂದು ರೈಸಿಂಗ್ ಹ್ಯಾಂಡ್ಸ್ ಯುತ್ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸತೀಶ ಬೆಳಕೋಟೆ ಹೇಳಿದರು.

ಇಲ್ಲಿಯ ಶರಣ ಉದ್ಯಾನ ಸಮೀಪದ ಸಪ್ತಗಿರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ನಡೆದ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶುಚಿತ್ವಕ್ಕೆ ಒತ್ತು ನೀಡಿದ್ದಲ್ಲಿ ಕೋವಿಡ್‍ನಿಂದ ಬೇಗ ಪಾರಾಗಬಹುದು ಎಂದು ತಿಳಿಸಿದರು.

ADVERTISEMENT

ಉಪನ್ಯಾಸಕ ಅನಿಲ್ ಜಾಧವ್ ನಾಗರಿಕರಿಗೆ ಸ್ವಚ್ಛತೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಮಂಗಲಾ ಮರಕಲೆ, ಉಪನ್ಯಾಸಕರಾದ ಅಂಬಿಕಾ ಸಾವಳಗಿ, ಮಾಧವ ತಮಸಾಳೆ, ಮಂದಾರ ಪಟವಾರಿ, ಸಂಜುಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.