ADVERTISEMENT

ದೇವಸ್ಥಾನ ಅಭಿವೃದ್ಧಿಗೆ ಸಹಕರಿಸಿ: ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:44 IST
Last Updated 27 ನವೆಂಬರ್ 2025, 5:44 IST
ಔರಾದ್ ಅಮರೇಶ್ವರ ದೇವಸ್ಥಾನದಲ್ಲಿ ತಹಶೀಲ್ದಾರ್ ಮಹೇಶ ಪಾಟೀಲ ಪೂಜೆ ಸಲ್ಲಿಸಿ ‍ಶ್ರಾವಣ ಮಾಸದ ಪ್ರವಚನ ಉದ್ಘಾಟಿಸಿದರು
ಔರಾದ್ ಅಮರೇಶ್ವರ ದೇವಸ್ಥಾನದಲ್ಲಿ ತಹಶೀಲ್ದಾರ್ ಮಹೇಶ ಪಾಟೀಲ ಪೂಜೆ ಸಲ್ಲಿಸಿ ‍ಶ್ರಾವಣ ಮಾಸದ ಪ್ರವಚನ ಉದ್ಘಾಟಿಸಿದರು   

ಔರಾದ್: ‘ಅಮರೇಶ್ವರ ದೇವಸ್ಥಾನ ಅಭಿವೃದ್ಧಿಗೆ ಸರ್ಕಾರ ತಯಾರಿದೆ. ಇದಕ್ಕೆ ಸ್ಥಳೀಯರ ಸಹಕಾರ ಅಗತ್ಯ’ ಎಂದು ತಹಶೀಲ್ದಾರ್ ಮಹೇಶ್ ಪಾಟೀಲ ಹೇಳಿದರು.

ಅಮರೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ರಾತ್ರಿ ‍ಶ್ರಾವಣ ಮಾಸದ ಪ್ರವಚನ ಉದ್ಘಾಟಿಸಿ ಅವರು ಮಾತನಾಡಿದರು.

ಹೊಸ ಮಹಾದ್ವಾರ ಸೇರಿದಂತೆ ದೇವಸ್ಥಾನ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಿ ಹಂತ ಹಂತವಾಗಿ ಕಾಮಗಾರಿ ಮಾಡಲಾಗುವುದು ಎಂದು ತಿಳಿಸಿದರು.

ADVERTISEMENT

ಪ್ರವಚನಕಾರ ವೇದಮೂರ್ತಿ ನವೀನ ಶಾಸ್ತ್ರಿ ಮಾತನಾಡಿ ಇಂತಹ ಉದ್ಭವಲಿಂಗ ಅಮರೇಶ್ವರ ದೇವಸ್ಥಾನದಲ್ಲಿ ಪ್ರವಚನ ಹೇಳುವುದು, ಕೇಳುವುದು ಬಹಳ ಒಳ್ಳೆ ಕೆಲಸ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಹಿರಿಯ ಮುಖಂಡ ಬಸವರಾಜ ದೇಶಮುಖ, ಶರಣಪ್ಪ ಪಂಚಾಕ್ಷರಿ, ಬಸವರಾಜ ಚ್ಯಾರೆ, ಸಿದ್ದರಾಮ ಹಳೆಂಬುರೆ, ಸೂರ್ಯಕಾಂತ ಬುಟ್ಟೆ, ರಾಜಕುಮಾರ ಚಿದ್ರೆ, ಪುರುಷೋತ್ತಮ ದೇಸಾಯಿ, ಮಾಣಿಕರಾವ ಗುಡೂರೆ ನೀಲಕಂಠ ಬಾವುಗೆ, ರವಿ ಸ್ವಾಮಿ, ಶರಣಪ್ಪ ಚಿಟ್ಮೆ, ಅಮರಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.