ಭಾಲ್ಕಿ: ಸಮಾಜ ಸೇವಾ ಕಾರ್ಯಮಾಡುವ ಸಂಘಟನೆಗಳಿಗೆ ಸದಾ ನನ್ನ ಬೆಂಬಲವಿದೆ ಎಂದು ಸಂಸದ ಸಾಗರ್ ಖಂಡ್ರೆ ಹೇಳಿದರು.
ಪಟ್ಟಣದ ಪುರಭವನದಲ್ಲಿ ಭಾನುವಾರ ನಡೆದ ಎಸ್.ಕೆ.ಫೌಂಡೇಶನ್ ಕಾರ್ಯ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನನ್ನ ಹೆಸರಿನ ಮೇಲೆ ಮಾಡಿರುವ ಫೌಂಡೇಶನ್‌ನಲ್ಲಿ ಎಲ್ಲ ಸಮುದಾಯ, ವರ್ಗದ ಯುವಕರು ಕೂಡಿಕೊಂಡು ಮಾಡಿದ್ದಾಗಿರಬೇಕು ಎಂದು ಸೂಚಿಸಿದ್ದೇನೆ. ಅದರಂತೆ ಸಾಹಿಲ್ ಮಾಸುಲದಾರ್ ಅಧ್ಯಕ್ಷತೆಯಲ್ಲಿ ಸಾಗರ್ ಖಂಡ್ರೆ ಫೌಂಡೇಶನ್ (ಎಸ್.ಕೆ.ಫೌಂಡೇಶನ್) ರಚಿಸಿದ್ದು ಸೂಕ್ತವಾಗಿದೆ. ಜನರಲ್ಲಿಯ ಸಮಸ್ಯೆಗಳನ್ನು ಅರಿತು ಕಾರ್ಯಮಾಡಲು ಈ ಫೌಂಡೇಶನ್ ನನಗೆ ಸಹಕಾರಿಯಾಗಬೇಕು ಎಂದರು.
ಸಾನ್ನಿಧ್ಯವಹಿಸಿ ಮಾತನಾಡಿದ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಎಸ್.ಕೆ.ಫೌಂಡೇಶನ್ ತಾಲ್ಲೂಕು ಮಟ್ಟದಲ್ಲಿ ಉದ್ಘಾಟನೆಗೊಂಡರೂ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬೆಳೆಯುವಂತಾಗಲಿ ಎಂದು ಹಾರೈಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಮಾತನಾಡಿ, ಜಿಲ್ಲೆಗೆ ಅಪರಾಧ ತಡೆ ಕಂಟ್ರೋಲ್ ರೂಂ ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರು ₹2 ಕೋಟಿ ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಗಿರೀಶ್ ರಂಜೋಳಕರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ಸದಾನಂದ ಹಾಗರಗಿ, ನಿವೃತ್ತ ಉಪನ್ಯಾಸಕ ಅಶೋಕ ರಾಜೋಳೆ ಎಸ್.ಕೆ.ಫೌಂಡೇಶನ್ ಕಾರ್ಯಕ್ಷಮತೆಯ ಬಗ್ಗೆ ಮಾತನಾಡಿದರು.
ನಿವೃತ್ತ ಶಿಕ್ಷಕ ಐಜಿಕ್ ಭಂಗಾರೆ ಪ್ರಾಸ್ತಾವಿಕ ಮಾತನಾಡಿದರು. ಎಸ್.ಕೆ.ಫೌಂಡೇಶನ್ ಅಧ್ಯಕ್ಷ ಸಾಹೀಲ್ ಮಾಸುಲ್ದಾರ್, ಉಪಾಧ್ಯಕ್ಷ ಕನ್ಕ ಬಿರಾದಾರ, ಕಾರ್ಯದರ್ಶಿ ರಾಹುಲ್ ಮೇತ್ರೆ, ಪ್ರಮುಖರಾದ ರೋಹನ್ ಶಿಂಧೆ, ಮಾಂತೇಶ ನಳಗಿರೆ, ಅನಿಕೇತ ಶೇರಿಕಾರ, ಸಾಯಿ ತೆಲಂಗ, ರಾಣೇಶ್ವರ ಕಾಳೆ, ಸುನೀಲ್ ಮೇತ್ರೆ, ಮಾಧವ ಧುಮಾಳೆ, ಆರ್ಯನ್ ಭೊಸಲೆ ಉಪಸ್ಥಿತರಿದ್ದರು. ರಾಹುಲ್ ಮೇತ್ರೆ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರು. ಕನಕ ಬಿರಾದಾರ ವಂದಿಸಿದರು.
ಕಷ್ಟದಲ್ಲಿರುವವರನ್ನು ಗುರುತಿಸಿ ಅವರಿಗೆ ಸ್ಪಂದಿಸುವ ಕಾರ್ಯ ಮಾಡುವುದೇ ಎಸ್.ಕೆ.ಫೌಂಡೇಶನ್ ಮುಖ್ಯ ಗುರಿಯಾಗಿರಲಿಸಾಗರ್ ಖಂಡ್ರೆ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.