ADVERTISEMENT

ಲಸಿಕೆ ಪಡೆದರೆ ಕೋವಿಡ್‌ ದೂರ: ಡಾ. ಸಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 6:33 IST
Last Updated 15 ಏಪ್ರಿಲ್ 2021, 6:33 IST
ಕಮಲನಗರದ ಸಮುದಾಯ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಅಭಿಯಾನಕ್ಕೆ ಆಡಳಿತ ವೈದ್ಯಾಧಿಕಾರಿ ಡಾ. ಸಂಗಾರೆಡ್ಡಿ ಚಾಲನೆ ನೀಡಿದರು
ಕಮಲನಗರದ ಸಮುದಾಯ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಅಭಿಯಾನಕ್ಕೆ ಆಡಳಿತ ವೈದ್ಯಾಧಿಕಾರಿ ಡಾ. ಸಂಗಾರೆಡ್ಡಿ ಚಾಲನೆ ನೀಡಿದರು   

ಕಮಲನಗರ: ‘45 ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟ ತಾಲ್ಲೂಕಿನ ಪ್ರತಿಯೊಬ್ಬ ನಾಗರಿಕ ಕಡ್ಡಾಯವಾಗಿ ಲಸಿಕೆ ಪಡೆದು ಕೋವಿಡ್-19 ನಿಂದ ರಕ್ಷಣೆ ಪಡೆಯಬೇಕು’ ಎಂದು ಇಲ್ಲಿನ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ
ಡಾ. ಸಂಗಾರೆಡ್ಡಿ ಮನವಿ ಮಾಡಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಕೋವಿಡ್ ಲಸಿಕಾ ಉಪಕೇಂದ್ರದಲ್ಲಿ ಜನಜಾಗೃತಿ ಕುರಿತು ನಡೆದ ಅಭಿಯಾನಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

‘ಮಾರ್ಚ್‌ ತಿಂಗಳಲ್ಲಿ 1196 ಜನ ಸೇರಿ ಇದುವರೆಗೆ 1588 ಜನರಿಗೆ ಲಸಿಕೆ ನೀಡಿದ್ದು, ಯಾರಿಗೂ ಅಡ್ಡಪರಿಣಾಮಗಳಾಗಿಲ್ಲ’ ಎಂದರು.

ADVERTISEMENT

ಡಾ.ಸಚಿನ್‌, ಡಾ.ಪವನ, ಡಾ.ರಾಹುಲ, ಡಾ.ಅಪರ್ಣಾ, ನರಸಿಂಗ್‌ ಗಾಯಕವಾಡ್, ಸಂದೀಪ ಬಿರಾದಾರ, ಅನೀಲಕುಮಾರ ತೋರ್ಣಾ, ಮಹೇಶ, ಹೇಮಾ, ಚನ್ನಬಸವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.