ADVERTISEMENT

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 8:16 IST
Last Updated 10 ಅಕ್ಟೋಬರ್ 2021, 8:16 IST
ಬೀದರ್ ತಾಲ್ಲೂಕಿನ ಕೊಳಾರ(ಕೆ) ಗ್ರಾಮದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದ ರಮೇಶ ದೊಡ್ಡಿ ಅವರು ಗಾಯನ ಪ್ರಸ್ತುತಪಡಿಸಿದರು
ಬೀದರ್ ತಾಲ್ಲೂಕಿನ ಕೊಳಾರ(ಕೆ) ಗ್ರಾಮದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದ ರಮೇಶ ದೊಡ್ಡಿ ಅವರು ಗಾಯನ ಪ್ರಸ್ತುತಪಡಿಸಿದರು   

ಜನವಾಡ: ಕೊಳಾರ ಪರಿಸರ ಸಂರಕ್ಷಣಾ ಸಮಿತಿ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಆಶ್ರಯದಲ್ಲಿ ವಿಶೇಷ ಘಟಕ ಯೋಜನೆಯಡಿ ಬೀದರ್ ತಾಲ್ಲೂಕಿನ ಕೊಳಾರ (ಕೆ) ಗ್ರಾಮದ ಜೈ ಹನುಮಾನ ಮಂದಿರದಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮ ಸಭಿಕರ ಗಮನ ಸೆಳೆಯಿತು.

ಕಲಾವಿದ ರಮೇಶ ದೊಡ್ಡಿ ಮಳಚಾಪುರ ಹಾಗೂ ಸಂಗಡಿಗರು ಸುಗಮ ಸಂಗೀತ, ಹಿರಿಯ ಕಲಾವಿದೆ ಸರಸ್ವತಿ ಚಿದ್ರೆ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು.

ಕೊಳಾರ ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಶಂಭು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನೀಲಕಂಠರಾವ್ ಪಾಪಡೆ, ಗ್ರಾಮ ಪಂಚಾಯಿತಿ ಸದಸ್ಯರಾದ ಅಮೃತಪ್ಪ ಪಾಪಡೆ, ರವಿಕುಮಾರ ಡುಮಾಳೆ, ಪ್ರಶಾಂತ ಶರಗಾರ, ಕಲ್ಯಾಣರಾವ್ ಕುಲಕರ್ಣಿ, ಗಣಪತಿ ಸೋನಪುರ ಉಪಸ್ಥಿತರಿದ್ದರು. ಅಮೃತಪ್ಪ ಚಿಲ್ಲರ್ಗಿ ಸ್ವಾಗತಿಸಿದರು. ಶಿವರಾಜ ಶೆರಗಾರ ನಿರೂಪಿಸಿದರು.

ADVERTISEMENT

ಜಾನಪದ ಸಂಭ್ರಮ ಕಾರ್ಯಕ್ರಮ
ಮಾಳೆಗಾಂವ:
ಬೀದರ್‌ ತಾಲ್ಲೂಕಿನ ಮಾಳೆಗಾಂವ ಪಂಚಾಯಿತಿ ಆವರಣದಲ್ಲಿ ಚೊಂಡಿಯ ಕರ್ಮಭೂಮಿ ಜಾನಪದ ಕಲಾ ಸಂಘದ ವತಿಯಿಂದ ಜಾನಪದ ಸಂಭ್ರಮ ಕಾರ್ಯಕ್ರಮ ಈಚೆಗೆ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೀಣಾ ದೇವದಾಸ ಚಿಮಕೋಡ ತಂಡದವರು ಸುಗಮ ಸಂಗೀತ ಹಾಗೂ ವಾಣಿ ದೇವದಾಸ ಚಿಮಕೋಡ ಜಾನಪದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರವಿಕಿರಣ, ಮಾಣಿಕಪ್ಪ ಕೌಡಗಾಂವ, ಪೆಂಟಾರೆಡ್ಡಿ ನಂದ್ಯಾಳಕರ್, ಮಾರುತ್ತೇಪ್ಪ ಸುತಾರ, ಕಂಟೆಪ್ಪ ಸುತಾರ, ಗ್ರಾಮ ಪಂಚಾಯಿತಿ ಸದಸ್ಯರಾದ ಗೋಪಾಲರೆಡ್ಡಿ ಯಾದುರೆಡ್ಡಿ ನಂದ್ಯಾಳಕರ್, ಜಗದೀಶ್ವರ ಹಣಮಂತಪ್ಪ ಗಡ್ಡೆ, ತುಕಾರಾಮ ಮಲ್ಲಪ್ಪಾ ಧಡ್ಡೆ, ಬಕ್ಕಪ್ಪಾ ದಂಡಿನ, ಶಂಕರ ಚೊಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.