ADVERTISEMENT

ಕಲ್ಲು ಕ್ವಾರಿಯಲ್ಲಿ ಯುವಕನ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 13:59 IST
Last Updated 18 ಜನವರಿ 2024, 13:59 IST
ನಾಗೇಶ ಬಾಬುರಾವ್
ನಾಗೇಶ ಬಾಬುರಾವ್    

ಔರಾದ್: ಬೀದರ್-ಔರಾದ್ ಮುಖ್ಯ ರಸ್ತೆಗೆ ಹೊಂದಿಕೊಂಡು ಇರುವ ಮುಸ್ತಾಪುರ ಬಳಿಯ ಕಲ್ಲಿನ ಕ್ವಾರಿಯಲ್ಲಿ ಗುರುವಾರ ಸಂಜೆ ನಾಗೇಶ್ ಬಾಬುರಾವ (21) ಎಂಬಾತನ ಶವ ಪತ್ತೆಯಾಗಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತನ ಶವ ಹೊರ ತೆಗೆದಿದ್ದಾರೆ. ಕ್ವಾರಿ ದಂಡೆ ಮೇಲೆ ಯುವಕ ಮೊಬೈಲ್ ಬಿಟ್ಟಿದ್ದಾನೆ. ಮುಸ್ತಾಪುರ ಗ್ರಾಮದ ಈ ಯುವಕ ಹೇಗೆ ಸತ್ತ ಎಂಬುದು ತನಿಖೆಯಿಂದ ಗೊತ್ತಾಗಲಿದೆ ಎಂದು ಸಂತಪುರ ಪಿಎಸ್‍ಐ ಮಹೆಬೂಬ್‍ಅಲಿ ತಿಳಿಸಿದ್ದಾರೆ.

ಮೃತ ನಾಗೇಶ ಕಳೆದ ಮಂಗಳವಾರದಿಂದಲೇ ನಾಪತ್ತೆಯಾಗಿದ್ದ. ಅವರ ತಾಯಿ ಸಿದ್ದಮ್ಮ ಪೊಲೀಸರಿಗೆ ದೂರು ನೀಡಿದ್ದರು. ಹುಡುಕಾಟದ ನಂತರ ಕಲ್ಲಿನ ಕ್ವಾರಿಯಲ್ಲಿ ಶವ ಪತ್ತೆಯಾಗಿದೆ. ನಾಗೇಶನ ತಂದೆ ತೀರಿಕೊಂಡಿದ್ದಾರೆ. ಮನೆಯಲ್ಲಿ ತಾಯಿ-ಮಗ ಇಬ್ಬರೂ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.