ADVERTISEMENT

ವಿದ್ಯುತ್ ಸ್ಪರ್ಶದಿಂದ ಹಸು ಸಾವು: ಪರಿಹಾರ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 16:01 IST
Last Updated 2 ಆಗಸ್ಟ್ 2024, 16:01 IST
ವಿದ್ಯುತ್ ತಗುಲಿ ಹಸು ಮೃತಪಟ್ಟ ಹಿನ್ನೆಲೆಯಲ್ಲಿ ರೈತ ಕಾಶೀನಾಥ ಅವರಿಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಬೀದರ್‌ನಲ್ಲಿ ಪರಿಹಾರ ಚೆಕ್ ವಿತರಿಸಿದರು
ವಿದ್ಯುತ್ ತಗುಲಿ ಹಸು ಮೃತಪಟ್ಟ ಹಿನ್ನೆಲೆಯಲ್ಲಿ ರೈತ ಕಾಶೀನಾಥ ಅವರಿಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಬೀದರ್‌ನಲ್ಲಿ ಪರಿಹಾರ ಚೆಕ್ ವಿತರಿಸಿದರು   

ಬಾವಗಿ(ಜನವಾಡ): ಉಪ ಜೀವನಕ್ಕೆ ಆಸರೆಯಾಗಿದ್ದ ಹಸು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಹಿನ್ನೆಲೆಯಲ್ಲಿ ಬೀದರ್ ತಾಲ್ಲೂಕಿನ ಬಾವಗಿ ಗ್ರಾಮದ ರೈತ ಕಾಶೀನಾಥ ಅವರಿಗೆ ಜೆಸ್ಕಾಂ ₹ 50 ಸಾವಿರ ಪರಿಹಾರ ಮಂಜೂರು ಮಾಡಿದೆ.

ಬೀದರ್‌ನಲ್ಲಿ ಈಚೆಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಪರಿಹಾರದ ಚೆಕ್ ವಿತರಿಸಿದರು.

ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಮೇಶ ಪಾಟೀಲ, ಪ್ರಮುಖರಾದ ರಾಜಕುಮಾರ ಪಾಟೀಲ, ಸಂತೋಷ ಜಗದಾಳೆ, ವೀರೇಶ ಬಮಣಿ, ಭೀಮಣ್ಣ ಸೋರಳ್ಳಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.