ಭಾಲ್ಕಿ: ತಾಲ್ಲೂಕಿನ ಖುದಾವಂದಪೂರ ಗ್ರಾಮದ ರೈತ ಮಹಿಳೆ ತನ್ನ ಮಗಳೊಂದಿಗೆ ಹೊಲದಿಂದ ಮನೆಗೆ ಮರಳುವಾಗ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.
ಭಾಗ್ಯಶ್ರೀ ಭೀಮರಾವ್ ಮೇತ್ರೆ (32), ಮಗಳು ವೈಶಾಲಿ ಮೇತ್ರೆ (9) ಮೃತರು. ಹೊಲದಿಂದ ಮನೆಗೆ ಬರುವಾಗ ಹೊಲದಲ್ಲಿಯೇ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಈ ಕುರಿತು ಮೇಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.