ಔರಾದ್: ತಾಲ್ಲೂಕಿನ ಕಂದಗೂಳ ಬುದ್ಧ ವಿಹಾರದಲ್ಲಿ ಗುರುವಾರ 69ನೇ ಧಮ್ಮ ಚಕ್ರ ಪರಿವರ್ತನಾ ದಿನ ಆಚರಿಸಲಾಯಿತು.
ವಿವಿಧೆಡೆಯಿಂದ ಆಗಮಿಸಿದ ಡಾ. ಅಂಬೇಡ್ಕರ್ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬುದ್ಧರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪೂರ ಮಾತನಾಡಿ, ‘ಇಡೀ ಜಗತ್ತಿಗೆ ಇಂದು ಗೌತಮ ಬುದ್ಧರ ಸಂದೇಶ ಅಗತ್ಯವಾಗಿದೆ. ಅಕ್ರಮ, ಅನಾಚಾರ, ಅಮಾನವೀಯ ಕೃತ್ಯ ತಡೆಯಲು ಬುದ್ಧರ ಚಿಂತನೆ ಬೇಕಾಗಿದೆ’ ಎಂದು ಹೇಳಿದರು.
ಮುಖಂಡ ಶಿವರಾಜ ಪೂಜಾರಿ ಮಾತನಾಡಿ, ‘ಬುದ್ಧರ ಸಂದೇಶದಲ್ಲಿ ಮಾನವೀಯ ಮೌಲ್ಯಗಳು ಅಡಗಿವೆ. ಹೀಗಾಗಿ ಸಮಾಜದಲ್ಲಿ ಶಾಂತಿ, ನೆಮ್ಮದಿಗೆ ಅವರ ವಿಚಾರಗಳು ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದರು.
ನಿವೃತ್ತ ಪಿಎಸ್ಐ ಬಸವರಾಜ ವಿಭೂತಿ, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಜೈಪ್ರಕಾಶ ಅಷ್ಟೂರೆ, ಭೀಮ ಆರ್ಮಿ ಸಂಘಟನೆಯ ಅಧ್ಯಕ್ಷ ಗೌತಮ ಮೇತ್ರೆ, ಮುಖಂಡರಾದ ನವನಾಥ ಚಟ್ನಾಳ, ಮಲ್ಲಿಕಾರ್ಜುನ ಜೊನ್ನೆಕೇರಿ, ಘಾಳೆಪ್ಪ ಶೆಂಬೆಳ್ಳಿ, ಜಗನ್ನಾಥ ಕೌಡಗಾಂವ, ಶಂಕರ ವಡಗಾಂವ, ಪ್ರಕಾಶ, ಮಹೇಶ ಶೇರಿಕಾರ, ವಿಶಾಲ ಶೇರಿಕಾರ, ಶರಣಪ್ಪ ಮರಕಲ್, ಸತೀಶ್ ಶೇರಿಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.