ಬೀದರ್: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಹಾಗೂ ಪುರೋಹಿತ ಪರಿಷತ್ ವತಿಯಿಂದ ಬುಧವಾರ ಭಾಲ್ಕಿ ಹಾಗೂ ಹುಮನಾಬಾದ್ ತಾಲ್ಲೂಕಿನ ಪುರೋಹಿತರಿಗೆ ಆಹಾರ ಕಿಟ್ ವಿತರಿಸಲಾಯಿತು.
ಭಾಲ್ಕಿ ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ ತಲಾ 40 ಪುರೋಹಿತರಿಗೆ ಹಾಗೂ ಬೀದರ್‌ನಲ್ಲಿ 20 ಜನರಿಗೆ ಸೇರಿ ಒಟ್ಟು ನೂರು ಪುರೋಹಿತರಿಗೆ ಕಿಟ್ ವಿತರಣೆ ಮಾಡಲಾಯಿತು.
ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ದೀಕ್ಷಿತ, ಉಪಾಧ್ಯಕ್ಷ ಅಕ್ಷಯ್ ದೀಕ್ಷಿತ, ಕಾರ್ಯದರ್ಶಿ ಗಿರಿಧರ ಜೋಶಿ, ಖಜಾಂಚಿ ಅನಂತ ಜೋಶಿ, ನಿರ್ದೇಶಕರಾದ ಪ್ರವೀಣ ಜೋಶಿ, ಸಚಿನ್ ಜೋಶಿ, ಶಿವಕುಮಾರ ಭಟ್ ಹಾಗೂ ಗಜಾನನ ಜೋಶಿ, ಶ್ರೀನಿವಾಸ ಕುಲಕರ್ಣಿ ಹಾಗೂ ವರುಣ ಜೋಶಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.