ADVERTISEMENT

ಕಟ್ಟಡ ಕಾರ್ಮಿಕರಿಗೆ ಆಹಾರಧಾನ್ಯ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 11:52 IST
Last Updated 7 ಆಗಸ್ಟ್ 2021, 11:52 IST
ಬೀದರ್‌ನ ವಾರ್ಡ್ ಸಂಖ್ಯೆ 18 ರ ವ್ಯಾಪ್ತಿಯ ಶಹಾಗಂಜ್‍ನಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಆಹಾರಧಾನ್ಯ ಕಿಟ್ ವಿತರಣೆಗೆ ರಾಜ್ಯ ಮಹಿಳಾ ಸಹಕಾರ ಮಹಾ ಮಂಡಳ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಹಾಗೂ ನಗರಸಭೆ ಸದಸ್ಯೆ ಉಲ್ಲಾಸಿನಿ ವಿಕ್ರಮ ಮುದಾಳೆ ಚಾಲನೆ ನೀಡಿದರು. ವಿಕ್ರಮ ಮುದಾಳೆ ಇದ್ದರು

ಬೀದರ್: ಕೋವಿಡ್ ಪ್ರಯುಕ್ತ ಕಾರ್ಮಿಕ ಇಲಾಖೆ ವತಿಯಿಂದ ಇಲ್ಲಿಯ ವಾರ್ಡ್ ಸಂಖ್ಯೆ 18 ರ ವ್ಯಾಪ್ತಿಯ ಶಹಾಗಂಜ್‍ನಲ್ಲಿ ಸಾಯಿ ಕಾಲೊನಿ, ಹನುಮಾನ ನಗರ, ನಂದಿ ಕಾಲೊನಿ ಹಾಗೂ ಶಹಾಗಂಜ್‍ನ 128 ಮಂದಿ ಕಟ್ಟಡ ಕಾರ್ಮಿಕರಿಗೆ ಆಹಾರಧಾನ್ಯ ಕಿಟ್ ವಿತರಿಸಲಾಯಿತು.

ರಾಜ್ಯ ಮಹಿಳಾ ಸಹಕಾರ ಮಹಾ ಮಂಡಳ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಹಾಗೂ ನಗರಸಭೆ ಸದಸ್ಯೆ ಉಲ್ಲಾಸಿನಿ ವಿಕ್ರಮ ಮುದಾಳೆ ಕಿಟ್ ವಿತರಣೆಗೆ ಜಂಟಿಯಾಗಿ ಚಾಲನೆ ನೀಡಿದರು.

ಕೋವಿಡ್‍ನಿಂದ ಸಂಕಷ್ಟಕ್ಕೆ ಒಳಗಾಗಿರುವ ಕಾರ್ಮಿಕರಿಗೆ ಬಿಜೆಪಿ ಸರ್ಕಾರ ಆಹಾರಧಾನ್ಯ ಕಿಟ್ ವಿತರಣೆ ಮೂಲಕ ನೆರವಾಗುತ್ತಿದೆ ಎಂದು ಉಲ್ಲಾಸಿನಿ ಹೇಳಿದರು.

ADVERTISEMENT

ಬೀದರ್ ಸೇರಿದಂತೆ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಆದರೆ, ಸಂಪೂರ್ಣ ನಿರ್ಮೂಲನೆ ಆಗಿಲ್ಲ. ಹೀಗಾಗಿ ಸಾರ್ವಜನಿಕರು ತಪ್ಪದೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

ಯುವ ಮುಖಂಡ ವಿಕ್ರಮ ಮುದಾಳೆ, ಕೆ. ಸಿದ್ರಾಮೇಶ್ವರ ರೆಡ್ಡಿ, ವಿನಾಯಕ ಮುದಾಳೆ, ಸಂತೋಷ ನಿಂಬೂರೆ, ಶರಣು ಬಿರಾದಾರ, ಶಿವಕುಮಾರ ಸ್ವಾಮಿ, ಮಹೇಶ ಮಡಕಿ, ಸಂತೋಷ ಭಂಗೂರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.