ADVERTISEMENT

200 ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 12:25 IST
Last Updated 23 ಅಕ್ಟೋಬರ್ 2021, 12:25 IST
ಬೀದರ್‌ನಲ್ಲಿ ಸಮೃದ್ಧಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಕಾರ್ಮಿಕ ಇಲಾಖೆ ವತಿಯಿಂದ ನೀಡಲಾಗುವ ಕೋವಿಡ್ ಸುರಕ್ಷಾ ಕಿಟ್‍ಗಳನ್ನು ಕಾರ್ಮಿಕರಿಗೆ ವಿತರಿಸಿದರು
ಬೀದರ್‌ನಲ್ಲಿ ಸಮೃದ್ಧಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಕಾರ್ಮಿಕ ಇಲಾಖೆ ವತಿಯಿಂದ ನೀಡಲಾಗುವ ಕೋವಿಡ್ ಸುರಕ್ಷಾ ಕಿಟ್‍ಗಳನ್ನು ಕಾರ್ಮಿಕರಿಗೆ ವಿತರಿಸಿದರು   

ಬೀದರ್: ಸಮೃದ್ಧಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಕಾರ್ಮಿಕ ಇಲಾಖೆ ವತಿಯಿಂದ ನೀಡಲಾಗುವ ಕೋವಿಡ್ ಸುರಕ್ಷಾ ಕಿಟ್‍ಗಳನ್ನು ನಗರದಲ್ಲಿ ಕಾರ್ಮಿಕರಿಗೆ ವಿತರಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಗಣಪತಿ ಹಾಲೇಪುರ್ಗೆಕರ್ ಅವರ ಮುಂದಾಳತ್ವದಲ್ಲಿ ನೌಬಾದ್ ಹಾಗೂ ಚಿದ್ರಿಯ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳಗಳಲ್ಲಿ 200 ಕಾರ್ಮಿಕರಿಗೆ ಸ್ಯಾನಿಟೈಸರ್, ಮಾಸ್ಕ್, ಹ್ಯಾಂಡ್ ವಾಶ್ ಲಿಕ್ವಿಡ್ ಹಾಗೂ ಸಾಬೂನು ಒಳಗೊಂಡ ಕಿಟ್ ವಿತರಣೆ ಮಾಡಿದರು.

ಕೋವಿಡ್ ಸೋಂಕಿನ ಕಾರಣ ಕಾರ್ಮಿಕರ ಸುರಕ್ಷತೆಗಾಗಿ ಕಾರ್ಮಿಕ ಇಲಾಖೆ ವತಿಯಿಂದ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಗಣಪತಿ ಹಾಲೇಪುರ್ಗೆಕರ್ ತಿಳಿಸಿದರು.

ADVERTISEMENT

ಕಾಮಗಾರಿ ಸ್ಥಳಗಳಿಗೆ ತೆರಳಿ ಕಾರ್ಮಿಕರಿಗೆ ಕಿಟ್ ಕೊಡಲಾಗುತ್ತಿದೆ. ಕೋವಿಡ್ ಸುರಕ್ಷತಾ ನಿಯಮಗಳ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಸಂಘದ ನಗರ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಹಾಲೇಪುರ್ಗೆಕರ್, ಉಪಾಧ್ಯಕ್ಷ ಮಿಲಿಂದ ಕಾಂಬಳೆ, ಕಾರ್ಯದರ್ಶಿ ರಾಹುಲ್ ಹಾಲೇಪುರ್ಗೆಕರ್, ಸಹ ಕಾರ್ಯದರ್ಶಿ ಉತ್ತಮ ಪ್ರೇಸಿಕರ್, ಸಂಜುಕುಮಾರ ಹಾಲೇಪುರ್ಗೆಕರ್, ಅನಿಲ್, ಸಾವನಕುಮಾರ, ಆಕಾಶ, ಗೌತಮ, ಫರಿದ್‍ಖಾನ್, ರಿಯಾಜ್‍ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.