ADVERTISEMENT

ವಾಹನಕ್ಕೊಂದು ಮರ, ಭೂಮಿಗೆ ವರ: ಜನಜಾಗೃತಿ ಅಭಿಯಾನ ಮಾಸಾಚರಣೆಯ ಪೋಸ್ಟರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2023, 16:20 IST
Last Updated 15 ಡಿಸೆಂಬರ್ 2023, 16:20 IST
ಭಾಲ್ಕಿ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ನಡೆಸುತ್ತಿರುವ ಜನಜಾಗೃತಿ ಅಭಿಯಾನದ ಪೋಸ್ಟರ್‌ ಅನ್ನು ಬೀದರ್‌ನಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ಬಿಡುಗಡೆಗೊಳಿಸಿದರು
ಭಾಲ್ಕಿ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ನಡೆಸುತ್ತಿರುವ ಜನಜಾಗೃತಿ ಅಭಿಯಾನದ ಪೋಸ್ಟರ್‌ ಅನ್ನು ಬೀದರ್‌ನಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ಬಿಡುಗಡೆಗೊಳಿಸಿದರು   

ಬೀದರ್‌: ‘ವಾಹನಕ್ಕೊಂದು ಮರ, ಭೂಮಿಗೆ ವರ’ ಶೀರ್ಷಿಕೆಯಡಿ ನಡೆಸುತ್ತಿರುವ ಜನಜಾಗೃತಿ ಅಭಿಯಾನ ಮಾಸಾಚರಣೆಯ ಪೋಸ್ಟರ್‌ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ನಗರದಲ್ಲಿ ಬಿಡುಗಡೆಗೊಳಿಸಿದರು.

ಇದೇ ವೇಳೆ ಅವರು ಡಿ.ಎಲ್‌., ಆರ್‌.ಸಿ. ಕಾರ್ಡ್‌ ಲಕೋಟೆ ಕೂಡ ಬಿಡುಗಡೆಗೊಳಿಸಿದರು. ಭಾಲ್ಕಿ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಿಂದ ವಾಯುಮಾಲಿನ್ಯ ನಿಯಂತ್ರಣ ಜಾಗೃತಿಗಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಭಾಲ್ಕಿ ಆರ್.ಟಿ.ಒ. ಮಹಮ್ಮದ್‌ ಜಾಫರ್ ಸಾದಿಕ್‌ ಮಾತನಾಡಿ, ಪ್ರತಿವರ್ಷ ನವೆಂಬರ್ ಮಾಸದಲ್ಲಿ ಈ ಅಭಿಯಾನ ನಡೆಸಲಾಗುತ್ತದೆ. ಬೀದರ್ ಜಿಲ್ಲೆಯ ಸಾರಿಗೆ ಇಲಾಖೆಯ ಕಚೇರಿಗಳಲ್ಲಿ ಹೊಸ ವಾಹನ ನೋಂದಣಿ ಹಾಗೂ ವಾಹನ ಚಾಲನಾ ಪತ್ರ ಪಡೆಯಲು ಬರುವ ಎಲ್ಲ ಅರ್ಜಿದಾರರಿಗೆ ಉಚಿತವಾಗಿ ಕದಂಬ, ಅರಳಿ, ಬಸವನಪಾದ, ಸಿಲ್ವರ್ ಓಕ್‌, ಹಲಸು ಮತ್ತು ಇತರೆ ಮರಗಳ ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇದುವರೆಗೆ ಸುಮಾರು 8 ಸಾವಿರ ಸಸಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಸಾರಿಗೆ ಇಲಾಖೆಯು ಹೊಸ ನೋಂದಣಿ ಆರ್.ಸಿ ಸ್ಮಾರ್ಟ್ ಕಾರ್ಡ್‌ ಮತ್ತು ಹೊಸ ಡಿ.ಎಲ್ ಸ್ಮಾರ್ಟ್ ಕಾರ್ಡಗಳನ್ನು ಅಂಚೆ ಇಲಾಖೆ ಮೂಲಕ ನೇರ ಅರ್ಜಿದಾರರ ಮನೆಗೆ ತಲುಪಿಸುತ್ತಿದೆ ಎಂದು ಹೇಳಿದರು. 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಸಾರಿಗೆ ಇಲಾಖೆಯ ಆರ್.ಟಿ.ಒ. ಮುರುಗೇಂದ್ರ ಶಿರೋಳ್ಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.