ADVERTISEMENT

ಔರಾದ್ | ಲಾಧಾ ಕ್ರಾಸ್ ಸೇತುವೆ ಶಿಥಿಲ: ಪ್ರಯಾಣಿಕರಲ್ಲಿ ಭೀತಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 16:06 IST
Last Updated 10 ಆಗಸ್ಟ್ 2024, 16:06 IST
ಔರಾದ್ ತಾಲ್ಲೂಕಿನ ಧುಪತಮಹಾಗಾಂವಗೆ ಹೋಗುವ ಮಾರ್ಗದಲ್ಲಿನ ಸೇತುವೆ ಶಿಥಿಲಗೊಂಡಿದೆ
ಔರಾದ್ ತಾಲ್ಲೂಕಿನ ಧುಪತಮಹಾಗಾಂವಗೆ ಹೋಗುವ ಮಾರ್ಗದಲ್ಲಿನ ಸೇತುವೆ ಶಿಥಿಲಗೊಂಡಿದೆ   

ಔರಾದ್: ತಾಲ್ಲೂಕಿನ ಲಾಧಾ ಕ್ರಾಸ್‌ನಿಂದ ಧುಪತಮಹಾಗಾಂವ್‌ಗೆ ಹೋಗುವ ಮಾರ್ಗದಲ್ಲಿನ ಹಳೆ ಸೇತುವೆ ಶಿಥಿಲಗೊಂಡು ವಾಹನ ಸವಾರರಿಗೆ ಭೀತಿ ಎದುರಾಗಿದೆ.

ಸುಮಾರು ಐದು ದಶಕದ ಹಳೆಯದಾದ ಸೇತುವೆ ಒಂದು ಭಾಗದ ಕಲ್ಲುಗಳು ಬಿದ್ದಿವೆ. ಕಳೆದ ವಾರ ಸುರಿದ ಮಳೆಯಿಂದ ಮತ್ತಷ್ಟು ಭಾಗ ಕುಸಿದಿದೆ. ಹೀಗಾಗಿ ನಿತ್ಯ ಈ ರಸ್ತೆ ಮೇಲೆ ಓಡಾಡುವ ಧುಪತಮಹಾಗಾಂವ್, ಬಾಬಳಿ, ಬಾಚೆಪಳ್ಳಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಳೆ ಸೇತುವೆ ಪೂರ್ಣ ಶಿಥಿಲಗೊಂಡಿದೆ. ಯಾವಾಗ ಬೇಕಾದರೂ ಬೀಳಬಹುದು. ಸಾರಿಗೆ ಸಂಸ್ಥೆ ಬಸ್ ಓಡಿಸಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಲೋಕೋಪಯೋಗಿ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರ ಧನರಾಜ ಮುಸ್ತಾಪುರ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.