ADVERTISEMENT

ಹುಮನಾಬಾದ್: ಭೂಮಿಯಿಂದ ಭಾರಿ ಸದ್ದು, ಆತಂಕ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 16:09 IST
Last Updated 19 ಸೆಪ್ಟೆಂಬರ್ 2021, 16:09 IST
ಹುಮನಾಬಾದ್ ತಾಲ್ಲೂಕಿನ ಘೋಡವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸನಾಳ್ ಗ್ರಾಮದಲ್ಲಿ ಭೂಮಿಯಿಂದ ಆಗಾಗ ಭಾರಿಸದ್ದು ಕೇಳಿ ಬರುತ್ತಿದ್ದು, ಸ್ಥಳಕ್ಕೆ ತಹಶೀಲ್ದಾರ್ ನಾಗಯ್ಯ ಹಿರೇಮಠ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರುಗೇಪ್ಪ, ಡಾ.ಗೋವಿಂದ, ಪಿಎಸ್ಐ ರವಿಕುಮಾರ್ ಅವರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಮುಖಂಡರೊಂದಿಗೆ ಚರ್ಚೆ ನಡೆಸಿದರು

ಹುಮನಾಬಾದ್: ತಾಲ್ಲೂಕಿನ ಘೋಡವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸನಾಳ್ ಗ್ರಾಮದಲ್ಲಿ ಭೂಮಿಯಿಂದ ಆಗಾಗ ಭಾರಿ ನಿಗೂಢ ಸದ್ದು ಕೇಳಿ ಬರುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಶುರುರಾಗಿದೆ.

ಕಳೆದ ಸುಮಾರು 15 ದಿನಗಳ ಹಿಂದೆ ಗ್ರಾಮದಲ್ಲಿ ದೊಡ್ಡ ಪ್ರಮಾಣದಸದ್ದು ಕೇಳಿ ಬಂದಿತ್ತು. ನಂತರ ಮತ್ತೆ ಎರಡು ದಿನಗಳಿಂದ ದಿನಕ್ಕೆ ಎರಡು ಬಾರಿ ಭೂಮಿಯಿಂದ ಸದ್ದು ಬರುತ್ತಿದೆ ಎಂದು ಗ್ರಾಮಸ್ಥ ಅತಿಕ್ ಪಾಶಾ ತಿಳಿಸಿದರು.

ತಹಶೀಲ್ದಾರ್ ಭೇಟಿ: ಸ್ಥಳಕ್ಕೆ ತಹಶೀಲ್ದಾರ್ ನಾಗಯ್ಯ ಹಿರೇಮಠ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರುಗೇಪ್ಪ, ಡಾ.ಗೋವಿಂದ, ಪಿಎಸ್ಐ ರವಿಕುಮಾರ್ ಅವರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಮುಖಂಡರೊಂದಿಗೆ ಚರ್ಚೆ ನಡೆಸಿ, ಧೈರ್ಯ ತುಂಬಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.