ADVERTISEMENT

ಬೀದರ್‌: ಸಡಗರದಿಂದ ಏಕಾದಶಿ ಆಚರಣೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 16:08 IST
Last Updated 18 ಜುಲೈ 2024, 16:08 IST
ಬೀದರ್‌ನ ಪಾಂಡುರಂಗ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರು ಭಜನೆ ಮಾಡಿದರು 
ಬೀದರ್‌ನ ಪಾಂಡುರಂಗ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರು ಭಜನೆ ಮಾಡಿದರು    

ಬೀದರ್‌: ನಗರದ ಚೌಬಾರ ಹಾಗೂ ಮೋಹನ್‌ ಮಾರ್ಕೆಟ್‌ನಲ್ಲಿರುವ ಪಾಂಡುರಂಗ ದೇವಸ್ಥಾನಗಳಲ್ಲಿ ಬುಧವಾರ ಸಡಗರ, ಸಂಭ್ರಮದಿಂದ ಏಕಾದಶಿ ಆಚರಿಸಲಾಯಿತು.

ವಿಠ್ಠಲ–ರುಕ್ಮೀಣಿ ದೇವರಿಗೆ ವಿಶೇಷ ರೀತಿಯಲ್ಲಿ ಅಲಂಕರಿಸಿ, ಪೂಜೆ ನೆರವೇರಿಸಲಾಯಿತು. ನಗರ ಹಾಗೂ ಗ್ರಾಮೀಣ ಭಾಗದಿಂದ ನೂರಾರು ಜನ ಭಕ್ತರು ಬಂದು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದರು. ದಿನವಿಡೀ ನಡೆದ ಭಜನೆ, ಕೀರ್ತನೆಗಳಲ್ಲಿ ಭಕ್ತರು ಉತ್ಸಾಹದಿಂದ ಪಾಲ್ಗೊಂಡರು. ದಿನವಿಡೀ ದೇವಸ್ಥಾನಗಳ ಪರಿಸರದಲ್ಲಿ ಜಾತ್ರೆ ವಾತಾವರಣ ಇತ್ತು.

‘ಏಕಾದಶಿ ವಿಷ್ಣುವಿನ ಶಯನ ಮಹೋತ್ಸವ. ನಾಲ್ಕು ತಿಂಗಳ ಅಧಿಕ ಮಾಸದಲ್ಲಿ ಬರುವ ಮೊದಲ ಏಕಾದಶಿ. ಜಪ, ತಪಕ್ಕೆ ಪ್ರಾಮುಖ್ಯತೆ ಇರುತ್ತದೆ. ದಿನವಿಡೀ ಕೆಲವರು ಉಪವಾಸ ಮಾಡುತ್ತಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.