ADVERTISEMENT

‘ಏಕಲ ಶ್ರೀ ಹರಿ ರಥ’ ಉದ್ಘಾಟನೆ ಇಂದು

ಜಿಲ್ಲೆಯ ಆಯ್ದ 35 ಗ್ರಾಮಗಳಲ್ಲಿ ರಥ ಸಂಚಾರ

​ಪ್ರಜಾವಾಣಿ ವಾರ್ತೆ
Published 26 ಮೇ 2022, 11:20 IST
Last Updated 26 ಮೇ 2022, 11:20 IST
ಬೀದರ್‌ನಲ್ಲಿ ಶುಕ್ರವಾರ ಉದ್ಘಾಟನೆಗೊಳ್ಳಲಿರುವ ಏಕಲ ಶ್ರೀ ಹರಿ ರಥ
ಬೀದರ್‌ನಲ್ಲಿ ಶುಕ್ರವಾರ ಉದ್ಘಾಟನೆಗೊಳ್ಳಲಿರುವ ಏಕಲ ಶ್ರೀ ಹರಿ ರಥ   

ಬೀದರ್: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸಂಚರಿಸಲಿರುವ ಏಕಲ ಅಭಿಯಾನದ ‘ಏಕಲ ಶ್ರೀ ಹರಿ ರಥ’ದ ಉದ್ಘಾಟನಾ ಸಮಾರಂಭ ನಗರದಲ್ಲಿ ಶುಕ್ರವಾರ (ಮೇ 27) ಸಂಜೆ 6.30ಕ್ಕೆ ನಡೆಯಲಿದೆ.

ಏಕಲ ಅಭಿಯಾನದ ರಾಷ್ಟ್ರೀಯ ಅಧ್ಯಕ್ಷ ಶಾಮಜಿ ಗುಪ್ತ್ ಅವರು ರಾಘವೇಂದ್ರ ಮಠದ ಆವರಣದಲ್ಲಿ ರಥವನ್ನು ಉದ್ಘಾಟಿಸಲಿದ್ದಾರೆ.

ಏಕಲ ಅಭಿಯಾನದ ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ರಾಜಕುಮಾರ ಅಗ್ರವಾಲ್, ಉಪಾಧ್ಯಕ್ಷ ಪ್ರಭಾಕರ ಮೈಲಾಪುರೆ, ಕಾರ್ಯದರ್ಶಿ ಡಾ. ರಘು ಕೃಷ್ಣಮೂರ್ತಿ, ಜಂಟಿ ಕಾರ್ಯದರ್ಶಿ ಬ್ರಿಜ್‍ಕಿಶೋರ ಮಾಲಾನಿ, ಖಜಾಂಚಿ ಹನುಮಯ್ಯ ಅರ್ಥಂ, ಪ್ರಮುಖರಾದ ಜಗನಾಥ ಭಂಗೂರೆ, ಹಂಸರಾಜ ಪಟೇಲ್, ಮಹಾಲಿಂಗಪ್ಪ ಬೆಲ್ದಾಳೆ, ಹಾವಗಿರಾವ್ ಮೈಲಾರೆ, ಶಂಕರರಾವ್ ಕೊಟರಕಿ, ಗೌಡಪ್ಪ, ರಾಮಕೃಷ್ಣ ಸಾಳೆ, ಶಿಕಾರಿ ವಿಶ್ವನಾಥ, ಶಿವಶರಣಪ್ಪ ಚಿಟ್ಟಾ, ರವೀಂದ್ರಸಿಂಗ್ ಠಾಕೂರ್, ರಾಜಕುಮಾರ ಅಳ್ಳೆ, ಜಾಧವ್ ಪಟೇಲ್, ಡಾ. ಗುಬ್ಬಿ, ಸತ್ಯಪ್ರಕಾಶ, ಪವನ್ ಬುಯ್ಯಾ, ಸಚ್ಚಿದಾನಂದ ಚಿದ್ರೆ, ಕಲ್ಪನಾ ದೇಶಪಾಂಡೆ, ಸಂಗೀತಾ ಠಾಕೂರ್, ಶೈಲಜಾ ಉದಗಿರೆ ಪಾಲ್ಗೊಳ್ಳುವರು.

ADVERTISEMENT

ನಂತರ ಮಠದಲ್ಲಿ ಭಜನ ಸಂಧ್ಯಾ ಕಾರ್ಯಕ್ರಮ ಜರುಗಲಿದೆ. ಕಲಾ ತಂಡಗಳು ಭಜನೆ ನಡೆಸಿಕೊಡಲಿವೆ.
ಸುಂದರವಾದ ಏಕಲ ಶ್ರೀ ಹರಿ ರಥದಲ್ಲಿ ದೇವಸ್ಥಾನವೂ ಇದೆ. ರಥವು ಜಿಲ್ಲೆಯ ಆಯ್ದ 35 ಗ್ರಾಮಗಳಲ್ಲಿ ನಿರಂತರ ಸಂಚರಿಸಲಿದೆ ಎಂದು ಏಕಲ ಅಭಿಯಾನದ ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ರಾಜಕುಮಾರ ಅಗ್ರವಾಲ್ ಹಾಗೂ ಕಾರ್ಯದರ್ಶಿ ಡಾ. ರಘು ಕೃಷ್ಣಮೂರ್ತಿ ತಿಳಿಸಿದ್ದಾರೆ.

ಆಯಾ ಗ್ರಾಮಗಳಲ್ಲಿ ರಥದಲ್ಲಿ ಆಧ್ಯಾತ್ಮಿಕ ಚಲನಚಿತ್ರ ಪ್ರದರ್ಶನ, ಸತ್ಸಂಗ, ಏಕಲ ವಿದ್ಯಾಲಯಗಳ ಪುನಃಶ್ಚೇತನ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದ್ದಾರೆ.

ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಏಕಲ ವಿದ್ಯಾಲಯಗಳು ನಡೆದಿವೆ. ಏಕಲ ವಿದ್ಯಾಲಯ, ಆರೋಗ್ಯ ಕಾರ್ಯಕ್ರಮ, ಗ್ರಾಮ ಉನ್ನತಿ, ಸಬಲೀಕರಣ ಶಿಕ್ಷಣ, ಮೌಲ್ಯ ಶಿಕ್ಷಣ ಜಾಗೃತಿ ರಥ ಸಂಚಾರದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.