ADVERTISEMENT

‘ಪರೀಕ್ಷಾ ತಯಾರಿಗೆ ರಸಪ್ರಶ್ನೆ ಸ್ಪರ್ಧೆ ಪೂರಕ’

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 4:44 IST
Last Updated 10 ಸೆಪ್ಟೆಂಬರ್ 2022, 4:44 IST
ಹುಲಸೂರಿನ ಗಣೇಶ ನಗರದ ಗಣೇಶ ಮಂಡಳಿ ವತಿಯಿಂದ ನಡೆದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಬಹುಮಾನ ನೀಡಲಾಯಿತು
ಹುಲಸೂರಿನ ಗಣೇಶ ನಗರದ ಗಣೇಶ ಮಂಡಳಿ ವತಿಯಿಂದ ನಡೆದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಬಹುಮಾನ ನೀಡಲಾಯಿತು   

ಹುಲಸೂರ: ‘ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ರಸಪ್ರಶ್ನೆ ಸ್ಪರ್ಧೆ ಪೂರಕ’ ಎಂದು ಶಾಸಕ ಶರಣು ಸಲಗರ ಹೇಳಿದರು.

ಪಟ್ಟಣದ ಗಣೇಶ ನಗರದ ಗಣೇಶ ಮಂಡಳಿ ವತಿಯಿಂದ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿ,‘ಉತ್ತಮವಾಗಿ ಅಭ್ಯಾಸ ಮಾಡಿ ಉನ್ನತ ಹುದ್ದೆಗೆ ಹೋಗಬೇಕು’ ಎಂದರು. ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ,‘ಇಂಥ ಕಾರ್ಯಕ್ರಮಗಳಿಂದ ಬೌದ್ಧಿಕ ವಿಕಾಸ ಸಾಧ್ಯ’ ಎಂದು ಹೇಳಿದರು.

ಜಿ.ಪಂ. ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ ಮಾತನಾಡಿದರು.

ADVERTISEMENT

ಪಟ್ಟಣದ ಆರು ಪ್ರೌಢಶಾಲೆಗಳು, ಎರಡು ಪದವಿ ಪೂರ್ವ ಕಾಲೇಜುಗಳು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ‌ಪ್ರಥಮ ಸ್ಥಾನ ಪಡೆದರು. ವಿದ್ಯಾಜ್ಯೋತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು.

ಎಂಕೆಕೆಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತೃತೀಯ ‌ಸ್ಥಾನ ಪಡೆದರು.

ವಕೀಲ ‌ಬಾಲಾಜಿ ಆದೇಪ್ಪ ನಿರೂಪಿಸಿದರು.

ಜಿ.ಪಂ. ಮಾಜಿ ಸದಸ್ಯ ಸುಧೀರ್ ಕಾಡಾದಿ, ಪಿಕೆಪಿಎಸ್ ಅಧ್ಯಕ್ಷ ಓಂಕಾರ ‌ಪಟ್ನೆ, ಗ್ರಾ.ಪಂ. ಮಾಜಿ ಅಧ್ಯಕ್ಷ ರಣಜಿತ್ ಗಾಯಕವಾಡ, ಚಂದ್ರಕಾಂತ ದೆಟ್ನೆ, ಗ್ರಾಮ ಪಂಚಾಯಿತಿ ಸದಸ್ಯರಾದ ದೇವಿಂದ್ರ ಭೋಪಳೆ, ರುಖಮ್ಮೋದಿನ ಖಾನ್, ಕಜಾಪ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ.ಎಸ್.ಖಫಲೆ, ಗಣೇಶ ಮಂಡಳಿ ಅಧ್ಯಕ್ಷ ‌ಸಂಗಮೇಶ ಭೊಪಳೆ, ಉಪಾಧ್ಯಕ್ಷ ವಿವೇಕ ಮುಸ್ತಾಪುರೆ, ರಮೇಶ, ವೈಜಿನಾಥ ಭೋಪಳೆ, ಕೇದಾರನಾಥ, ಕಲ್ಯಾಣಿ ದಾನಾ ಹಾಗೂ ಉಮೇಶ ಭೊಪಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.