ADVERTISEMENT

ಜಾತ್ರಾ ಮಹೋತ್ಸವ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 5:04 IST
Last Updated 18 ಜನವರಿ 2026, 5:04 IST
ಭಾಗ್ಯವಂತಿದೇವಿ
ಭಾಗ್ಯವಂತಿದೇವಿ   

ಬಸವಕಲ್ಯಾಣ: ತಾಲ್ಲೂಕಿನ ನಿರ್ಗುಡಿಯ ಲಕ್ಷ್ಮಿದೇವಿ ಮತ್ತು ಭಾಗ್ಯವಂತಿದೇವಿ ದೇವಸ್ಥಾನದಲ್ಲಿ ಜನವರಿ 18 ರಿಂದ 21 ರವರೆಗೆ ಸಂಭ್ರಮದ ಜಾತ್ರಾ ಮಹೋತ್ಸವ ಜರುಗಲಿದ್ದು ಮಾತೆ ಭಾಗ್ಯವಂತಿದೇವಿ ಅವರ ತುಲಾಭಾರ, 11 ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಜಾನುವಾರು ಪ್ರದರ್ಶನ ನಡೆಯಲಿದೆ.

ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಬಳಿಕ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಶರಣಬಸಪ್ಪ ದಳಪತಿ ಮತ್ತು ದೇವಸ್ಥಾನ ಸಮಿತಿ ಅಧ್ಯಕ್ಷ ಸಂತೋಷ ಬಿರಾದಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಜನವರಿ 18ರಂದು ಪಲ್ಲಕ್ಕಿ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು ಸಚಿವ ಸಂತೋಷ ಲಾಡ್‌ ಉದ್ಘಾಟಿಸುವರು. ಪುಣೆಯ ದಾದಾ ಮಹಾರಾಜ, ಮಾತೆ ಭಾಗ್ಯವಂತಿದೇವಿ ಹಾಗೂ ಸದಾನಂದ ಮಠದ ವಿಶ್ವೇಶ್ವರಾನಂದ ಸರಸ್ವತಿ ಮಹಾರಾಜ ಸಾನ್ನಿಧ್ಯ ವಹಿಸುವರು. ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಕಾಡಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಬಾಬು ಹೊನ್ನಾನಾಯಕ್ ಅತಿಥಿಗಳಾಗಿ ಪಾಲ್ಗೊಳ್ಳುವರು.

ADVERTISEMENT

ಜನವರಿ 19ರಂದು ಬೆಳಿಗ್ಗೆ 11.30ಕ್ಕೆ ಧರ್ಮಸಭೆ ನಡೆಯುವುದು. ಮಾತೆ ಭಾಗ್ಯವಂತಿದೇವಿ ಅವರ 13ನೇ ತುಲಾಭಾರ ನೆರವೆರಲಿದೆ. ಜನವರಿ 20 ರಂದು ಬೆಳಿಗ್ಗೆ 11.30ಕ್ಕೆ ಸಿಡಿ ಬಂಡಿ ಕಾರ್ಯಕ್ರಮವಿರುತ್ತದೆ. ಮಾತಾಜಿಯವರ 14ನೇ ತುಲಾಭಾರ ಮತ್ತು 11 ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜನವರಿ 21 ರಂದು ಜಾನುವಾರು ಪ್ರದರ್ಶನವಿರುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.