ಸಾವು
ಪ್ರಾತಿನಿಧಿಕ ಚಿತ್ರ
ಔರಾದ್: ತಾಲ್ಲೂಕಿನ ಜಮಗಿ ಗ್ರಾಮದಲ್ಲಿ ಉದ್ದಿನ ರಾಶಿ ಯಂತ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.
ಮೃತನು ಮಲಗೊಂಡ ಬೂದರೆ (40) ಎಂದು ಗುರುತಿಸಲಾಗಿದೆ. ರಾಶಿ ಯಂತ್ರದ ಆಪರೇಟರ್ ಆಗಿರುವ ಮಲಗೊಂಡ ಬುಧವಾರ ಮಧ್ಯಾಹ್ನ ಮಹಾಜವಾಡಿ ಶಿವಾರದಲ್ಲಿ ಉದ್ದಿನ ರಾಶಿ ಮಾಡುವಾಗ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.
ಘಟನೆಯಲ್ಲಿ ಮೃತನ ಶರೀರ ಛಿದ್ರವಾಗಿದೆ. ಈ ಕುರಿತು ಮೃತನ ಪತ್ನಿ ರೇಷ್ಮಾ ನೀಡಿದ ದೂರಿನ ಮೇರೆಗೆ ಸಂತಪೂರ ಪೊಲೀಸರು ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.