ಪ್ರಾತಿನಿಧಿಕ ಚಿತ್ರ
ಅಲಿಯಂಬರ್: ಸಾಲ ಬಾಧೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ಭೀಮಣ್ಣ ರಾಮಗೊಂಡ (70) ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಭೀಮಣ್ಣಗೆ 22 ಗುಂಟೆ ಜಮೀನು ಇದೆ. ಗ್ರಾಮದ ಪಿಕೆಪಿಎಸ್‍ನಲ್ಲಿ ಸಾಲ ಮಾಡಿದ್ದರು ಎಂದು ಜನವಾಡ ಪಿಎಸ್‍ಐ ಬಾಷುಮಿಯ ತಿಳಿಸಿದ್ದಾರೆ.
ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.