ಕಪಲಾಪುರ(ಎ)(ಜನವಾಡ): ಸಾಲಬಾಧೆ ತಾಳದೆ ಬೀದರ್ ತಾಲ್ಲೂಕಿನ ಕಪಲಾಪುರ ಗ್ರಾಮದ ರೈತ ಶಿವಕುಮಾರ ಸಂಗನಬಸಪ್ಪ(38) ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗ್ರಾಮದ ತಮ್ಮ ಹೊಲದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಕುಮಾರ ಅವರು ಡಿಸಿಸಿ ಬ್ಯಾಂಕ್‍ನಿಂದ ₹ 4 ಲಕ್ಷ ಸಾಲ ಪಡೆದಿದ್ದರು. ಅವರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು ಇದ್ದಾರೆ.
ಸ್ಥಳಕ್ಕೆ ಪಿಎಸ್‍ಐ ಹುಲೆಪ್ಪ ಗೌಡಗೊಂಡ ಭೇಟಿ ನೀಡಿ ಪರಿಶೀಲಿಸಿದರು. ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.