ADVERTISEMENT

ಬಸವಕಲ್ಯಾಣ | ಆತ್ಮಹತ್ಯೆಗೆ ಸಿದ್ಧನಾದ ರೈತ: ಬಗೆಹರಿದ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 4:18 IST
Last Updated 29 ಜುಲೈ 2025, 4:18 IST
ಬಸವಕಲ್ಯಾಣದ ತಹಶೀಲ್ದಾರ್ ಕಚೇರಿ ಎದುರಲ್ಲಿ ಕೊಹಿನೂರನ ರೈತ ಪ್ರಶಾಂತ ಲಕಮಾಜಿ ಕೈಯಲ್ಲಿ ಹಗ್ಗ ಹಿಡಿದು ಕುಳಿತಿರುವುದು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆನಂದ ಪಾಟೀಲ, ಶಿವಾ ಕಲ್ಲೋಜಿ ಉಪಸ್ಥಿತರಿದ್ದರು
ಬಸವಕಲ್ಯಾಣದ ತಹಶೀಲ್ದಾರ್ ಕಚೇರಿ ಎದುರಲ್ಲಿ ಕೊಹಿನೂರನ ರೈತ ಪ್ರಶಾಂತ ಲಕಮಾಜಿ ಕೈಯಲ್ಲಿ ಹಗ್ಗ ಹಿಡಿದು ಕುಳಿತಿರುವುದು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆನಂದ ಪಾಟೀಲ, ಶಿವಾ ಕಲ್ಲೋಜಿ ಉಪಸ್ಥಿತರಿದ್ದರು   

ಬಸವಕಲ್ಯಾಣ: ಹೊಲಕ್ಕೆ ಹೋಗುವ ದಾರಿಯಲ್ಲಿನ ಅಡೆತಡೆ ತೆರವುಗೊಳಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಾಲ್ಲೂಕಿನ ಕೊಹಿನೂರ ಗ್ರಾಮದ ರೈತ ಪ್ರಶಾಂತ ಲಕಮಾಜಿ ಸೋಮವಾರ ತಹಶೀಲ್ದಾರ್ ಕಚೇರಿ ಎದುರಲ್ಲಿ ಧರಣಿ ಕುಳಿತಿದ್ದರಿಂದ ಸಮಸ್ಯೆ ಬಗೆಹರಿದಿದೆ.

ಪ್ರಶಾಂತ ಲಕಮಾಜಿ ಕೈಯಲ್ಲಿ ಹಗ್ಗ ಹಿಡಿದುಕೊಂಡು ಬಂದು ತಹಶೀಲ್ದಾರ್ ಅವರಿಗೆ ಭೇಟಿಯಾದರು. ಹೊಲಕ್ಕೆ ಹೋಗುವ ದಾರಿಯಲ್ಲಿ ಕೆಲವರು ಪೈಪ್‌ಲೈನ್‌ ಅಳವಡಿಸಿದ್ದು ಅದನ್ನು ತೆಗೆಯಲು ಅನೇಕ ವರ್ಷಗಳಿಂದ ಆಗ್ರಹಿಸುತ್ತಿದ್ದರೂ ಯಾರೂ ಕ್ರಮ ತೆಗೆದುಕೊಂಡಿಲ್ಲ. ಒಂದು ವೇಳೆ ಶೀಘ್ರ ಕೆಲಸ ಆಗದಿದ್ದರೆ ಇಲ್ಲೇ ನೇಣು ಬಿಗಿದುಕೊಳ್ಳುತ್ತೇನೆ ಎಂದು ಬೆದರಿಕೆಯೊಡ್ಡಿದರು.

ಈ ಕಾರಣ ಕಂದಾಯ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಹೋಗಿ ಪೈಪ್‌ಲೈನ್ ತೆರವುಗೊಳಿಸಿದ್ದಾರೆ. ಈ ಬಗ್ಗೆ ಫೋಟೊ ತೋರಿಸಿದಾಗಲೇ ರೈತ ಧರಣಿ ಅಂತ್ಯಗೊಳಿಸಿದ್ದಾನೆ. ಧರಣಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆನಂದ ಪಾಟೀಲ, ಮುಖಂಡ ಶಿವಾ ಕಲ್ಲೋಜಿ ಮತ್ತಿತರರು ಸಹ ಪಾಲ್ಗೊಂಡಿದ್ದರು.

ADVERTISEMENT
ಬಸವಕಲ್ಯಾಣದ ತಹಶೀಲ್ದಾರ್ ಕಚೇರಿ ಎದುರಲ್ಲಿ ಕೊಹಿನೂರನ ರೈತ ಪ್ರಶಾಂತ ಲಕಮಾಜಿ ಕೈಯಲ್ಲಿ ಹಗ್ಗ ಹಿಡಿದು ಕುಳಿತಿರುವುದು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆನಂದ ಪಾಟೀಲ ಶಿವಾ ಕಲ್ಲೋಜಿ ಉಪಸ್ಥಿತರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.