ADVERTISEMENT

ಕಮಲನಗರ: ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದ ರೈತರು

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 3:39 IST
Last Updated 12 ಜೂನ್ 2021, 3:39 IST
ಕಮಲನಗರ ತಾಲ್ಲೂಕಿನ ಬೆಳಕುಣಿ(ಬಿ) ಗ್ರಾಮದಲ್ಲಿ ಶುಕ್ರವಾರ ಮುಂಗಾರು ಬಿತ್ತನೆ ಬೀಜ ಪಡೆಯಲು ಮುಗಿಬಿದ್ದ ರೈತರು
ಕಮಲನಗರ ತಾಲ್ಲೂಕಿನ ಬೆಳಕುಣಿ(ಬಿ) ಗ್ರಾಮದಲ್ಲಿ ಶುಕ್ರವಾರ ಮುಂಗಾರು ಬಿತ್ತನೆ ಬೀಜ ಪಡೆಯಲು ಮುಗಿಬಿದ್ದ ರೈತರು   

ಕಮಲನಗರ: ರೈತರು ಮುಂಗಾರು ಹಂಗಾಮು ಬೀಜ ಪಡೆಯಲು ನಿತ್ಯ ರೈತ ಸಂಪರ್ಕ ವಿತರಣೆ ಕೇಂದ್ರಗಳಿಗೆ ಪರದಾಡುವಂತಾಗಿದೆ.

ಶುಕ್ರವಾರಕಮಲನಗರ ತಾಲ್ಲೂಕಿನ ಬೆಳಕುಣಿ(ಬಿ) ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಸೋಯಾ, ಉದ್ದು ಬೀಜ ಪಡೆಯಲು ಮುಗಿಬಿದ್ದಿರುವುದು ಕಂಡು ಬಂತು.

ಹಗಲು ರಾತ್ರಿ ಎನ್ನದೆ ಬೀಜ ಪಡೆಯಲು ಪರದಾಡುವುದು ಮುಂದುವರಿದಿದೆ. ಕೆಲ ರೈತರು ರಾತ್ರಿ ಹೊತ್ತಿನಲ್ಲೂ ಹಾಸಿಗೆ ಹಿಡಿದು ಕೊಂಡು ಬಂದು ಕೇಂದ್ರ ಸ್ಥಾನ ಹೊರವಲಯದಲ್ಲಿಯೇ ಬೀಡು ಬಿಟ್ಟಿದ್ದಾರೆ.

ADVERTISEMENT

ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ಯೋಜನೆಯಡಿ ಕೇಂದ್ರ-ರಾಜ್ಯ ಸರ್ಕಾರದ ಮೊದಲ ಕಂತಿನ ಹಣ ಬಿಡುಗಡೆ ಆಗಿದೆ. ಈ ಹಣ ಈಗಾಗಲೇ ರೈತರ ಖಾತೆಗೆ ಜಮೆಯಾಗಿದೆ. ಹಣ ಪಡೆಯಲು ಕೂಡ ಬ್ಯಾಂಕ್‍ಗಳ ಮುಂದೆ ರೈತರ ಸಾಲು ನಿತ್ಯ ಕಂಡು ಬರುತ್ತಿದೆ.

ಈಗಾಗಲೇ ಮುಂಗಾರು ಬಿತ್ತನೆಗೆ ರೈತರು ಸಿದ್ಧವಾಗಿದ್ದು, ಬೀಜಗೊಬ್ಬರ ಖರೀದಿಗೆ ಹಣದ ಅವಶ್ಯಕತೆ ಇದೆ. ತಮ್ಮ ಖಾತೆಯಲ್ಲಿ ಹಣವಿದ್ದರೂ ರೈತರಿಗೆ ಲಾಕ್ ಡೌನ್ ಸಂಕಷ್ಟ ತಂದೊಡ್ಡಿದೆ. ಹಣ ಪಡೆಯಲು ಬಂದರೆ ಪಟ್ಟಣದಲ್ಲಿ ಪೊಲೀಸರ ಕಾಟ ತಪ್ಪಿಸಿಕೊಳ್ಳಲಾಗುತ್ತಿಲ್ಲ. ದಂಡ ತಪ್ಪಿದ್ದಲ್ಲ. ದಂಡ ತುಂಬಿ ಮತ್ತೇ ರೈತ ಸಂಪರ್ಕ ಕೇಂದ್ರ ಮುಂದೆ ಸರದಿಯಲ್ಲಿ ನಿಲ್ಲುವುದು ಕೂಡ ತಪ್ಪುತ್ತಿಲ್ಲ ಎನ್ನುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.