ADVERTISEMENT

ಸೇವಾ ಮನೋಭಾವ ಬೆಳೆಸಿಕೊಳ್ಳಿ: ಮಲ್ಲಿಕಾರ್ಜುನ ಖೂಬಾ

ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 2:53 IST
Last Updated 30 ಜೂನ್ 2022, 2:53 IST
ಬಸವಕಲ್ಯಾಣದ ಹೊಸಪೇಟೆ ಓಣಿಯಲ್ಲಿ ಈಚೆಗೆ ನಡೆದ ಸನ್ಮಾನ ಹಾಗೂ ಕ್ರೀಡಾ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಇದ್ದರು
ಬಸವಕಲ್ಯಾಣದ ಹೊಸಪೇಟೆ ಓಣಿಯಲ್ಲಿ ಈಚೆಗೆ ನಡೆದ ಸನ್ಮಾನ ಹಾಗೂ ಕ್ರೀಡಾ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಇದ್ದರು   

ಬಸವಕಲ್ಯಾಣ: ‘ಜನಪ್ರತಿನಿಧಿಗಳಲ್ಲಿ ಸೇವಾ ಮನೋಭಾವನೆ ಬೆಳೆದರೆ ಮಾತ್ರ ಊರು, ನಗರ ಮತ್ತು ದೇಶದ ಅಭಿವೃದ್ಧಿ ಸಾಧ್ಯ’ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು.

ನಗರದ ಹೊಸಪೇಟೆ ಓಣಿಯ ವಾರ್ಡ್ ಸಂಖ್ಯೆ 7ರಲ್ಲಿ ನಗರಸಭೆ ಸದಸ್ಯ ಕುತುಬುದ್ದೀನ್ ಅದೋನಿ ಅವರಿಂದ ಈಚೆಗೆ ನಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಸನ್ಮಾನ, ಉಚಿತ ಆರೋಗ್ಯ ತಪಾಸಣೆ ಮತ್ತು ಯುವ ಸಂಘಗಳಿಗೆ ಕ್ರೀಡಾ ಸಾಮಗ್ರಿ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಗರಸಭೆ ಸದಸ್ಯರು ಓಣಿ ಅಭಿವೃದ್ಧಿ ಕೈಗೊಳ್ಳುವುದರ ಜತೆಗೆ ವಿವಿಧ ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಮಾದರಿ ಕೆಲಸವಾಗಿದೆ. ಜನಪರ ಕಾಳಜಿ ಇರುವವರನ್ನು ಜನ ಬೆಂಬಲಿಸಬೇಕು. ಸಂಘ ಸಂಸ್ಥೆಯವರು ಸಹಾಯ ಸಹಕಾರ ನೀಡಿ ಪ್ರೋತ್ಸಾಹಿಸಬೇಕು’ ಎಂದರು.

ADVERTISEMENT

ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ ಮಾತನಾಡಿ,‘ಸಸಿ ವಿತರಣೆ, ಯುವ ತಂಡಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ, ಆಶಾ ಕಾರ್ಯಕರ್ತರಿಗೆ ಸೀರೆ ವಿತರಣೆಗೈದಿರುವ ಕುತುಬುದ್ದೀನ್ ಅವರ ಕೆಲಸ ಉತ್ತಮವಾದದ್ದು’ ಎಂದರು.
ಕಾಂಗ್ರೆಸ್ ಮುಖಂಡ ರೈಸೊದ್ದೀನ್, ಉಪನ್ಯಾಸಕರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ನರಸಿಂಗರೆಡ್ಡಿ ಗದ್ಲೇಗಾಂವ್, ಜೆಡಿಎಸ್ ಕಾರ್ಯಾಧ್ಯಕ್ಷ ಆಕಾಶ ಖಂಡಾಳೆ, ನಗರಸಭೆ ಮಾಜಿ ಅಧ್ಯಕ್ಷ ಅಜರಅಲಿ ನವರಂಗ, ಕುತುಬುದ್ದೀನ್ ಹಾಗೂ ಇಕ್ರಾಮೊದ್ದೀನ್ ಖಾದಿವಾಲೆ ಮಾತನಾಡಿದರು.

ನಗರಸಭೆ ಸದಸ್ಯ ಪವನ್ ಗಾಯಕವಾಡ, ರಸೀದ್ ಅದೋನಿ, ಪತ್ರಕರ್ತರ ಸಂಘದ ಅಧ್ಯಕ್ಷ ಕಲ್ಯಾಣರಾವ್ ಮದರಗಾಂವಕರ್, ಉದಯಕುಮಾರ ಮುಳೆ, ಪದೀಪ ವಿಸಾಜಿ, ಖಯಾಮೋದ್ದಿನ್, ಜುಬೇರ್ ನವಾಜಭಾಯಿ, ಸವೂದ್ ಅನ್ವರ್, ವಸೀಮ್ ಅಕ್ರಮ, ಮಹ್ಮದಮಿಯ್ಯಾ, ಜಾಕೀರ ಸೊಂಡಕೆ, ರೌಫ್ಅಲಿ ಹಾಗೂ ರಾಜಕುಮಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.