ADVERTISEMENT

ಪೌರಕಾರ್ಮಿಕರ ಪಾತ್ರ ಮಹತ್ವದ್ದು: ಮಾಲಾಶ್ರೀ ಶಾಮರಾವ್‌

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 6:48 IST
Last Updated 29 ಸೆಪ್ಟೆಂಬರ್ 2022, 6:48 IST
ಚಿಟಗುಪ್ಪ ಪುರಸಭೆ ಕಚೇರಿಯಲ್ಲಿ ಬುಧವಾರ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಕಾರ್ಮಿಕರನ್ನು ಸನ್ಮಾನಿಸಲಾಯಿತು
ಚಿಟಗುಪ್ಪ ಪುರಸಭೆ ಕಚೇರಿಯಲ್ಲಿ ಬುಧವಾರ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಕಾರ್ಮಿಕರನ್ನು ಸನ್ಮಾನಿಸಲಾಯಿತು   

ಚಿಟಗುಪ್ಪ: ‘ಆರೋಗ್ಯವಂಥ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಅವರನ್ನು ಎಲ್ಲರೂ ಗೌರವದಿಂದ ಕಾಣಬೇಕು’ ಎಂದು ಪುರಸಭೆ ಅಧ್ಯಕ್ಷೆ ಮಾಲಾಶ್ರೀ ಶಾಮರಾವ್‌ ಹೇಳಿದರು.

ಇಲ್ಲಿಯ ಪುರಸಭೆ ಕಚೇರಿಯಲ್ಲಿ ನಡೆದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯಾಧಿಕಾರಿ ಹುಸಾಮೋದ್ದೀನ್‌ ಮಾತನಾಡಿ,‘ಪೌರ ಕಾರ್ಮಿಕರ ಆರೋಗ್ಯ ಸಂರಕ್ಷಣೆಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು. ನಂತರ ಕಾರ್ಮಿಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಪ್ರಥಮ, ದ್ವಿತಿಯ ಹಾಗೂ ತೃತಿಯ ಬಹುಮಾನ ವಿತರಿಸಲಾಯಿತು. ಉಪಾಧ್ಯಕ್ಷೆ ಸೌಭಾಗ್ಯವತಿ ಸ್ವಾಮಿ, ಪುರಸಭೆ ಸದಸ್ಯರಾದ ವಿಶಾಲ ಬೊರಾಳೆ, ಶೋಭಾ ಸುಭಾಷ,ಲಕ್ಷ್ಮಿಬಾಯಿ ಶರಣಪ್ಪ, ಮೀರ್‌ ಮುಜಾಫರ್‌ ಅಲಿ, ಮಹ್ಮದ್‌ ಹಬೀಬ್‌, ಪರಮೇಶ್ವರ ಬಬಡಿ, ಶಶಿಕಾಂತ ದೀಕ್ಷಿತ, ಸಿಬ್ಬಂದಿ ಪೂಜಾ, ರವಿಕುಮಾರ, ಚಿದಾನಂದ, ಸಂತೋಷ ಬಿರಾದಾರ, ವೈಶಾಲಿ, ದಿಗಂಬರ್‌, ಕವಿತಾ, ಸರೋಜನಿ, ಶಿವಕುಮಾರ್‌, ರಾಜಕುಮಾರ್‌, ಸಂತೋಷ, ನಿತ್ಯಾನಂದ, ಸಚಿನ್‌, ನಥಾನಿಯಲ್‌, ಅಶ್ವಿನಿ, ಮಂಜುಳಾ, ಗಣ್ಯರಾದ ಶಾಮರಾವ್‌, ಶರಣು ಹಾಗೂ ಮಂಜುನಾಥ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT