ಬಸವಕಲ್ಯಾಣ: ತಾಲ್ಲೂಕಿನ ಘೋಟಾಳದಲ್ಲಿ ಮಂಗಳವಾರ ನಡೆದ ರಾಮನಾಥ ಮಹಾರಾಜ ಜಾತ್ರೆಯಲ್ಲಿ ಭಾರತೀಯ ಸೇನೆಯ 11 ಜನ ಯೋಧರನ್ನು ಸನ್ಮಾನಿಸಲಾಯಿತು.
ಮುಖಂಡ ಶರಣು ಸಲಗರ ಮಾತನಾಡಿ, `ರೈತರು ದೇಶದ ಬೆನ್ನೆಲುಬುವಾದರೆ ಯೋಧರು ದೇಶದ ರಕ್ಷಕರು. ಇವರ ಕಾರ್ಯಕ್ಕೆ ಪ್ರೋತ್ಸಾಹ ಅಗತ್ಯ’ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಯೋಧರಾದ ಕಮಲಾಕರ ಮುಳಜೆ, ಬಾಬುರಾವ್ ನಾಗದೆ, ರುಕ್ಮಾಜಿ ಮಂಡಲೆ ಮತ್ತು ಸೇವೆಯಲ್ಲಿರುವ ಸಂತೋಷ ಕಾಳೆ, ಹರಿಶಾಂತ ಕೋಟಂಪಲ್ಲೆ, ಯೋಗೇಶ ಭೋಗಿಲೆ, ಶಿವಾನಂದ ಕೋಟಂಪಲ್ಲೆ, ಗಜಾನಂದ ಕೋಟಂಪಲ್ಲೆ, ಮಾಧವ ಮಂಜುಳೆ, ಶ್ರಾವಣ ಮಮಾಳೆ ಹಾಗೂ ನರಸಿಂಗ್ ಕೋಟಂಪಲ್ಲೆ ಅವರನ್ನು ಸನ್ಮಾನಿಸಲಾಯಿತು.
ಲಕ್ಷ್ಮಣ ಕುಂಬಾರ, ತಾನಾಜಿ ನಾಟಕಾರೆ ರಂಗೋಲಿ, ಹರಿಶ್ಚಂದ್ರ ಭೋಗಿಲೆ ಚಿತ್ರಕಲೆ ಪ್ರದರ್ಶಿಸಿದರು. ಸಂಧ್ಯಾ ಸೋಮನಾಥ ಸ್ವಾಮಿ ಭಾರತ ಮಾತೆಯ ವೇಷ ತೊಟ್ಟಿದ್ದರು. ಸೋಮನಾಥ ಮುಕ್ತಾ, ಸೋಮನಾಥಸ್ವಾಮಿ, ಬಸವರಾಜಸ್ವಾಮಿ ಬಟಗೇರಾ, ಮನೋಜ ಸ್ವಾಮಿ, ಓಂ ಸ್ವಾಮಿ, ಪ್ರಕಾಶ ಮುಕ್ತಾ, ರಾಜೀವ ಭೋಸ್ಲೆ, ಸಂತೋಷ ಭೋಗಿಲೆ, ಧನರಾಜ ಪೂಜಾರಿ, ಪ್ರದೀಪ ಪಾಟೀಲ್, ವಾಮನರಾವ ಪೂಜಾರಿ, ಪ್ರದೀಪ್ ಗಡವಂತೆ, ಬಾಬುರಾವ ಹಿಂಸೆ ಇದ್ದರು. ಸೋಪಾನ ಕುಂಬಾರ ಸಂಗೀತ ಪ್ರಸ್ತುತ ಪಡಿಸಿದರು. ಉಮೇಶ ಗೌಳಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.