ಬಸವಕಲ್ಯಾಣ: ನಗರದ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರೆ ಅಂಗವಾಗಿ ಸೋಮವಾರ ಪಲ್ಲಕ್ಕಿ, ನಂದಿಧ್ವಜ ಮೆರವಣಿಗೆ ಸಂಭ್ರಮದಿಂದ ಜರುಗಿತು. ಮಧ್ಯರಾತ್ರಿ ತೇರು ಎಳೆಯಲಾಯಿತು.
ಎರಡು ದಿನಗಳವರೆಗೆ ಅಭಿಷೇಕ, ಪೂಜೆ, ಹಾಸ್ಯ ಮತ್ತಿತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪಲ್ಲಕ್ಕಿ ಮೆರವಣಿಗೆಗೆ ಶಾಸಕ ಶರಣು ಸಲಗರ ಹಾಗೂ ಸಾವಿತ್ರಿ ಸಲಗರ ದಂಪತಿಗಳು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಕೋಟೆ ಹತ್ತಿರದಲ್ಲಿ ನಂದಿಧ್ವಜಗಳಿಗೆ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ, ಪ್ರಮುಖರಾದ ಶ್ರೀಕಾಂತ ಬಡದಾಳೆ, ವಿವೇಕಾನಂದ ಹೊದಲೂರೆ ಜಂಟಿಯಾಗಿ ಪೂಜೆ ಸಲ್ಲಿಸಿದರು.
ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರಿಂದ ಪ್ರವಚನ ಹೇಳಿದರು. ಗುಂಡಣ್ಣ ಡಿಗ್ಗಿ ಹಾಸ್ಯ ಕಾರ್ಯಕ್ರಮ ನಡೆಸಿದರು. ರಾತ್ರಿ ನಡೆದ ರಥೋತ್ಸವಕ್ಕೆ ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ ದಂಪತಿಗಳು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಅನ್ನ ಸಂತರ್ಪಣೆ ನಡೆಯಿತು. ಮದ್ದು ಸುಡಲಾಯಿತು.
ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮಹೇಶ ಪಾಟೀಲ, ಮಲ್ಲಿಕಾರ್ಜುನ ದೇವಸ್ಥಾನ ಪಂಚ ಸಮಿತಿ ಅಧ್ಯಕ್ಷ ನಾಗನಾಥ ಸಂಗೋಳಗೆ, ಪ್ರಮುಖರಾದ ಅನಿಲಕುಮಾರ ರಗಟೆ, ಗುರುನಾಥ ದುರ್ಗೆ, ಸೂರ್ಯಕಾಂತ ನಾಸೆ, ಉಮೇಶ ಕೆವಟಗೆ, ಸಂತೋಷ ದುರ್ಗೆ, ಮಂಜುನಾಥ ಗುರವ, ವಿಜಯಕುಮಾರ ಹಾರಕೂಡೆ, ಸಿದ್ದು ಆಗ್ರೆ, ಚನ್ನಪ್ಪ ರಾಜಾಪುರೆ, ದೀಪಕ ಆಗ್ರೆ, ಶ್ರೀಶೈಲ್ ವಾತಡೆ, ಭದ್ರಪ್ಪ ಅಂದೇಲಿ, ಶಿವಕುಮರ ಆಗ್ರೆ, ಬಾಬುರಾವ್ ಚಪಾತೆ, ಸುಭಾಷ ಬಾವಗೆ, ಶಿವಶರಣಪ್ಪ ಮಂಠಾಳೆ, ಚಂದ್ರಕಾಂತ ಧುಮ್ಮನಸೂರೆ, ಸಿದ್ರಾಮ ನಾಸೆ, ಸೋಮಶೇಖರ ನಾಸೆ, ಮಹೇಶ ದುರ್ಗೆ, ಸಚಿನ ತರಮೂಡೆ, ಸಂಜೀವಕುಮರ ಹಾರಕೂಡೆ, ಜಗದೀಶ ಶೀಲವಂತ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.