ADVERTISEMENT

ಔರಾದ್ | ಗುಡಿಸಲುವಾಸಿ ಸಂತ್ರಸ್ತ ಮಹಿಳೆಗೆ ನೆರವು

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 6:48 IST
Last Updated 15 ಜನವರಿ 2026, 6:48 IST
ಔರಾದ್ ಪಟ್ಟಣದ ಗುಡಿಸಲುವಾಸಿ ಸಂತ್ರಸ್ತ ಮಹಿಳೆಗೆ ಸುಭಾಷ್ ಚಂದ್ರ ಬೋಸ್ ಯುವಕ ಸಂಘದಿಂದ ಆಹಾರ ಕಿಟ್ ವಿತರಿಸಲಾಯಿತು
ಔರಾದ್ ಪಟ್ಟಣದ ಗುಡಿಸಲುವಾಸಿ ಸಂತ್ರಸ್ತ ಮಹಿಳೆಗೆ ಸುಭಾಷ್ ಚಂದ್ರ ಬೋಸ್ ಯುವಕ ಸಂಘದಿಂದ ಆಹಾರ ಕಿಟ್ ವಿತರಿಸಲಾಯಿತು   

ಔರಾದ್: ಇಲ್ಲಿಯ ಆದರ್ಶ ವಿದ್ಯಾಲಯ ಬಳಿಯ ಫುಲುಬಾಯಿ ವಾಘಮಾರೆ ಎಂಬ ಮಹಿಳೆ ಗುಡಿಸಲು ಸೋಮವಾರ ರಾತ್ರಿ ಆಕಸ್ಮಿಕ ಬೆಂಕಿಗೆ ಸುಟ್ಟು ಭಸ್ಮವಾಗಿದೆ.
ಸುಭಾಷ್ ಚಂದ್ರ ಬೋಸ್ ಯುವಕ ಸಂಘದ ಅಧ್ಯಕ್ಷ ರತ್ನದೀಪ ಕಸ್ತೂರೆ ಮತ್ತಿತರರು ಬುಧವಾರ ಸಂತ್ರಸ್ತ ಮಹಿಳೆಯನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.

ನಿತ್ಯದ ಉಪ ಜೀವನಕ್ಕೆ ಅಗತ್ಯವಿರುವ 25 ಕೆ.ಜಿ ಅಕ್ಕಿ, ಅಡುಗೆ ಎಣ್ಣೆ, ಉಪ್ಪು, ಖಾರ ಸೇರಿದಂತೆ ಆಹಾರ ಸಾಮಗಿಯ ಕಿಟ್ ವಿತರಿಸಿದರು.

ಗುಡಿಸಲು ಪೂರ್ಣ ಸುಟ್ಟು ಹೋಗಿ ಮಗನ ಮದುಗೆಗಾಗಿ ಸಂಗ್ರಹಿಸಿಟ್ಟಿದ್ದ ₹ 55 ಸಾವಿರ ನಗದು ಸೇರಿದಂತೆ ಇಡೀ ಗುಡಿಸಲು ಸುಟ್ಟು ಭಸ್ಮವಾಗಿದೆ. ಹೀಗಾಗಿ ಸರ್ಕಾರ ನೆರವಿಗೆ ಬರುವಂತೆ ಆಗ್ರಹಿಸಿದರು.

ADVERTISEMENT

ಪಟ್ಟಣ ಪಂಚಾಯಿತಿಯಿಂದ ಈ ಮಹಿಳೆಗೆ ₹10 ಸಾವಿರ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ದಲಿತ ಸೇನೆ ತಾಲ್ಲೂಕು ಅಧ್ಯಕ್ಷ ಸುನಿಲ ಮಿತ್ರಾ, ದತ್ತಾತ್ರಿ ಬಾಪುರೆ, ಚಂದು ಡಿಕೆ, ವಿಶ್ವದೀಪ ಕಸ್ತೂರೆ, ಅಜಯ ವರ್ಮಾ, ರೋಹಿತ ಕಾಂಬಳೆ, ಆನಂದ, ಶಿವಕುಮಾರ ಮೊಕ್ತೆದಾರ, ಸುನೀಲ ಜಿರೋಬೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.