ADVERTISEMENT

ಹುಮನಾಬಾದ್‌ | ತ್ಯಾಜ್ಯಕ್ಕೆ ಬೆಂಕಿ: ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:38 IST
Last Updated 26 ಅಕ್ಟೋಬರ್ 2025, 7:38 IST
<div class="paragraphs"><p>ಹುಮನಾಬಾದ್‌ ಪಟ್ಟಣದಲ್ಲಿ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಿದರು</p></div>

ಹುಮನಾಬಾದ್‌ ಪಟ್ಟಣದಲ್ಲಿ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಿದರು

   

ಹುಮನಾಬಾದ್: ಪಟ್ಟಣದ ಸಾಯಿ ಚಿತ್ರ ಮಂದಿರ ಹತ್ತಿರದ ಖಾಲಿ ನಿವೇಶನದಲ್ಲಿ ಸಂಗ್ರಹಗೊಂಡಿದ್ದ ಪ್ಲಾಸ್ಟಿಕ್, ಕಸದ ತ್ಯಾಜ್ಯಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದು, ಸಕಾಲದಲ್ಲಿ ಅಗ್ನಿಶಾಮಕ ದಳದವರು ಆಗಮಿಸಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

ಈ ಸ್ಥಳದ ಮುಂಭಾಗದಲ್ಲಿ ವಿವಿಧ ವಾಣಿಜ್ಯ ಮಳಿಗೆಗಳು ಇದ್ದು ಅದರಿಂದ ಸಂಗ್ರಹಗೊಂಡ ಈ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ಪರಿಣಾಮ ಬಾರಿ ಪ್ರಮಾಣದಲ್ಲಿ ಹೊಗೆ ಆವರಿಸಿತ್ತು. ತಕ್ಷಣ ಪ್ರತ್ಯಕ್ಷದರ್ಶಿಗಳು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ಅನಾಹುತ ತಪ್ಪಿದಂತಾಗಿದೆ.‌

ADVERTISEMENT

ಆತಂಕಗೊಂಡ ಜನರು: ಬೆಂಕಿ ಕಾಣಿಸಿಕೊಂಡ ತಕ್ಷಣ ಭಾರಿ ಪ್ರಮಾಣದಲ್ಲಿ ಹೊಗೆ ಪಟ್ಟಣದ ತುಂಬಾ ಆವರಿಸಿಕೊಂಡಿದ್ದ ಕಾರಣ ಜನರು ಕೆಲ ಹೊತ್ತು ಆತಂಕಕ್ಕೆ ಒಳಗಾಗಿದ್ದರು. ಬೆಂಕಿಯ ಹೊಗೆಯನ್ನು ವೀಕ್ಷಣೆ ಮಾಡಲು ನೂರಾರು ಜನರು ಬಂದಿದ್ದರು.

ಹುಮನಾಬಾದಲ್ಲಿ ಶನಿವಾರ ಬೆಂಕಿಯಿಂದ ಹೊಗೆ ಆವರಿಸಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.