ಸಿರ್ಸಿ(ಎ)(ಜನವಾಡ): ಬೀದರ್ ತಾಲ್ಲೂಕಿನ ಸಿರ್ಸಿ(ಎ) ಗ್ರಾಮದ ದಯಾನಂದ ಸ್ವಾಮಿ ಅವರ ಹೊಲದಲ್ಲಿ ಕಬ್ಬು ಕಟಾವಿನ ನಂತರ ಉಳಿದಿದ್ದ ರವದಿಗೆ ಸೋಮವಾರ ಆಕಸ್ಮಿಕ ಬೆಂಕಿ ತಗುಲಿ ಹಾನಿ ಸಂಭವಿಸಿದೆ.
ಒಂದು ಎಕರೆ ಹೊಲದಲ್ಲಿನ ಕಬ್ಬಿನ ರವದಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ವಾಟರ್ ಪಂಪ್ ಸ್ಟಾರ್ಟರ್, ಹನಿ ನೀರಾವರಿ ಪೈಪ್, ವಿದ್ಯುತ್ ವೈರ್, ಗಿಡ, ಕಟ್ಟಿಗೆಗಳು ಸುಟ್ಟಿದ್ದು, ₹ 1 ಲಕ್ಷದಷ್ಟು ನಷ್ಟವಾಗಿದೆ ಎಂದು ದಯಾನಂದ ಸ್ವಾಮಿ ತಿಳಿಸಿದ್ದಾರೆ.
ಬಗದಲ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.