ADVERTISEMENT

ಮಾಂಜ್ರಾ ನದಿಯಲ್ಲಿ ಪ್ರವಾಹ: 20 ಹಳ್ಳಿಗಳ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 12:43 IST
Last Updated 28 ಸೆಪ್ಟೆಂಬರ್ 2025, 12:43 IST
<div class="paragraphs"><p>ಮಾಂಜ್ರಾ ನದಿಯಲ್ಲಿ ಪ್ರವಾಹ: 20 ಹಳ್ಳಿಗಳ ಸಂಪರ್ಕ ಕಡಿತ</p></div>

ಮಾಂಜ್ರಾ ನದಿಯಲ್ಲಿ ಪ್ರವಾಹ: 20 ಹಳ್ಳಿಗಳ ಸಂಪರ್ಕ ಕಡಿತ

   

ಬೀದರ್‌: ಜಿಲ್ಲೆಯ ಹುಲಸೂರ, ಕಮಲನಗರ ಹಾಗೂ ಔರಾದ್‌ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಭಾನುವಾರವೂ ಮಳೆಯಾಗಿದೆ.

ಮಾಂಜ್ರಾ ನದಿಯಲ್ಲಿ ಪ್ರವಾಹ ಬಂದಿರುವುದರಿಂದ ಹುಲಸೂರ ತಾಲ್ಲೂಕಿನ ಸಾಯಗಾಂವ್‌–ವಲಂಡಿ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಇಪ್ಪತ್ತು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.

ADVERTISEMENT

ತಾಲ್ಲೂಕಿನ ಕೊಂಗಳಿ ಗ್ರಾಮದ ಸುತ್ತಮುತ್ತ ನೀರು ಆವರಿಸಿಕೊಂಡಿದ್ದು, ದ್ವೀಪವಾಗಿ ಬದಲಾಗಿದೆ. ಗ್ರಾಮಸ್ಥರು ಎಲ್ಲಿಗೂ ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕಿನ

ಶ್ರೀಮಾಳಿ–ಯಲ್ಲಮವಾಡಿ ಸಂಪರ್ಕ ಕೂಡ ಕಡಿತಗೊಂಡಿದೆ.

ಕಮಲನಗರ ತಾಲ್ಲೂಕಿನ ಸಂಗಮ- ಠಾಣಾ ಕುಶನೂರ, ಸಂಗಮ-ಖೇಡ್ ಸಂಪರ್ಕ ಸೇತುವೆ ಜಲಾವೃತಗೊಂಡಿದೆ. ಭಾಲ್ಕಿ ತಾಲ್ಲೂಕಿನ ದಾಡಗಿ ಸೇತುವೆ ಮೇಲಿಂದ ನೀರು ಹರಿಯುತ್ತಿರುವುದರಿಂದ ಭಾಲ್ಕಿ-ಹುಮನಾಬಾದ್– ಬಸವಕಲ್ಯಾಣ ಮಾರ್ಗ ಬಂದ್ ಆಗಿದೆ.

ಬೀದರ್‌, ಹುಮನಾಬಾದ್‌, ಔರಾದ್‌ ಹಾಗೂ ಬಸವಕಲ್ಯಾಣದಲ್ಲಿ ಮಳೆ ಬಿಡುವು ಕೊಟ್ಟಿದೆ. ಬೆಳಿಗ್ಗೆ ಕೆಲಕಾಲ ಜಿಟಿಜಿಟಿ ಮಳೆಯಾಯಿತು. ದಿನವಿಡೀ ಮೋಡ ಕವಿದ ವಾತಾವರಣ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.