ADVERTISEMENT

ಸುಂದರ ಬದುಕಿಗೆ ಜಾನಪದ ಸಾಹಿತ್ಯ ಪ್ರೇರಣೆ: ಬಸವರಾಜ ಧನ್ನೂರ್

ಉದ್ಯಮಿ ಬಸವರಾಜ ಧನ್ನೂರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 11:55 IST
Last Updated 7 ಫೆಬ್ರುವರಿ 2021, 11:55 IST
ಬೀದರ್‌ನ ಕರ್ನಾಟಕ ಸಾಹಿತ್ಯ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಜನಪದ ಸಾಹಿತ್ಯ ಉತ್ಸವ ಹಾಗೂ ಎರಡನೇ ಜಿಲ್ಲಾ ಜಾನಪದ ಸಮ್ಮೇಳನದಲ್ಲಿ ಉದ್ಯಮಿ ಬಸವರಾಜ ಧನ್ನೂರ್ ಅವರು ಸಾಹಿತಿ ಎಸ್.ಬಿ. ಕುಚಬಾಳ ಅವರ ‘ಅಚ್ಚು ಮೆಚ್ಚಿನ ಬಿಚ್ಚು ಹೂಗಳು’ ಕವನ ಸಂಕಲನ ಬಿಡುಗಡೆ ಮಾಡಿದರು
ಬೀದರ್‌ನ ಕರ್ನಾಟಕ ಸಾಹಿತ್ಯ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಜನಪದ ಸಾಹಿತ್ಯ ಉತ್ಸವ ಹಾಗೂ ಎರಡನೇ ಜಿಲ್ಲಾ ಜಾನಪದ ಸಮ್ಮೇಳನದಲ್ಲಿ ಉದ್ಯಮಿ ಬಸವರಾಜ ಧನ್ನೂರ್ ಅವರು ಸಾಹಿತಿ ಎಸ್.ಬಿ. ಕುಚಬಾಳ ಅವರ ‘ಅಚ್ಚು ಮೆಚ್ಚಿನ ಬಿಚ್ಚು ಹೂಗಳು’ ಕವನ ಸಂಕಲನ ಬಿಡುಗಡೆ ಮಾಡಿದರು   

ಬೀದರ್: ‘ರಾಣಿ ಸತ್ಯಮೂರ್ತಿ ಅವರ ಕಲಾ ಸೇವೆ ಅನನ್ಯವಾಗಿದೆ. ಕಲೆಯನ್ನು, ಕಲಾವಿದರನ್ನು ಬೆಳೆಸಲು ಅವರು ಬದ್ಧತೆಯಿಂದ ಶ್ರಮಿಸುತ್ತಿದ್ದಾರೆ. ಕಲೆಗಾಗಿ ಬದುಕು ಮೀಸಲಿಟ್ಟ ಅವರನ್ನು ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ’ ಎಂದು ಉದ್ಯಮಿ ಬಸವರಾಜ ಧನ್ನೂರ್ ಹೇಳಿದರು.

ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ನಿಜವಾದ ಭಾರತ ಜಾನಪದದಲ್ಲಿದೆ. ಸಾರ್ಥಕ ಬದುಕು ಸಾಗಿಸಲು ಏನೇನು ಬೇಕೋ ಅದೆಲ್ಲವೂ ಜಾನಪದ ಸಾಹಿತ್ಯದಲ್ಲಿದೆ. ಸುಂದರ, ಸಾರ್ಥಕ ಬದುಕು ಸಾಗಿಸಲು ಜಾನಪದ ಸಾಹಿತ್ಯ ಪ್ರೇರಣೆ ನೀಡುತ್ತದೆ’ ಎಂದು ತಿಳಿಸಿದರು.

ADVERTISEMENT

‘ಬೀದರ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಜಾನಪದ ಉತ್ಸವಕ್ಕೆ ಅಗತ್ಯ ಸಹಾಯ, ಸಹಕಾರ ನೀಡಲಾಗುವುದು’ ಎಂದು ಧನ್ನೂರ್ ಭರವಸೆ ನೀಡಿದರು.

ಇದಕ್ಕೂ ಮೊದಲು ಸಾಹಿತಿ ಎಸ್.ಬಿ. ಕುಚಬಾಳ ಅವರ ‘ಅಚ್ಚು ಮೆಚ್ಚಿನ ಬಿಚ್ಚು ಹೂಗಳು’ ಕವನ ಸಂಕಲನ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.