ADVERTISEMENT

ಜನಪದ ವೈದ್ಯ ಪದ್ಧತಿ ಪರಿಣಾಮಕಾರಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 16:02 IST
Last Updated 11 ಜನವರಿ 2021, 16:02 IST
ಬೀದರ್‌ನಲ್ಲಿ ನಡೆದ ಜಾನಪದ ಜಗಲಿ ಕಾರ್ಯಕ್ರಮವನ್ನು ಕೇಂದ್ರ ಜಾಗೃತಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಉದ್ಘಾಟಿಸಿದರು. ಎಸ್.ಬಿ. ಕುಚಬಾಳ, ರೇವಣಪ್ಪ ಮೂಲಗೆ, ವಿಜಯಕುಮಾರ ಪಾಟೀಲ, ಡಾ. ರಾಜಕುಮಾರ ಹೆಬ್ಬಾಳೆ, ಸುನೀತಾ ಕೂಡ್ಲಿಕರ್, ಮಹಾನಂದ ಮಡಕಿ ಇದ್ದರು
ಬೀದರ್‌ನಲ್ಲಿ ನಡೆದ ಜಾನಪದ ಜಗಲಿ ಕಾರ್ಯಕ್ರಮವನ್ನು ಕೇಂದ್ರ ಜಾಗೃತಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಉದ್ಘಾಟಿಸಿದರು. ಎಸ್.ಬಿ. ಕುಚಬಾಳ, ರೇವಣಪ್ಪ ಮೂಲಗೆ, ವಿಜಯಕುಮಾರ ಪಾಟೀಲ, ಡಾ. ರಾಜಕುಮಾರ ಹೆಬ್ಬಾಳೆ, ಸುನೀತಾ ಕೂಡ್ಲಿಕರ್, ಮಹಾನಂದ ಮಡಕಿ ಇದ್ದರು   

ಬೀದರ್: ಜನಪದ ವೈದ್ಯ ಪದ್ಧತಿ ಪರಿಣಾಮಕಾರಿಯಾಗಿದೆ ಎಂದು ಸಾಹಿತಿ ನಿರಹಂಕಾರ ಬಂಡಿ ನುಡಿದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ, ತಾಲ್ಲೂಕು ಘಟಕ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಹಾಗೂ ಕರ್ನಾಟಕ ಸಾಹಿತ್ಯ ಸಂಘದ ವತಿಯಿಂದ ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಆಯೋಜಿಸಿದ್ದ ಜಾನಪದ ಜಗಲಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಎಲ್ಲ ವೈದ್ಯ ಪದ್ಧತಿಗಳಿಗೂ ಜನಪದ ವೈದ್ಯ ಪದ್ಧತಿಯೇ ಮೂಲ ಎಂದು ಹೇಳಿದರು.

ADVERTISEMENT

ಕೇಂದ್ರ ಜಾಗೃತಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಉದ್ಘಾಟಿಸಿದರು. ಉಪನ್ಯಾಸಕ ವಿಜಯಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಆರ್‍ಎಸ್‍ಎಚ್‍ಎಸ್ ಪ್ರೌಢಶಾಲೆ ಮುಖ್ಯ ಶಿಕ್ಷಕ ರೇವಣಪ್ಪ ಮೂಲಗೆ, ಎಸ್.ಬಿ. ಕುಚಬಾಳ ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀತಾ ಕೂಡ್ಲಿಕರ್ ಸ್ವಾಗತಿಸಿದರು. ಮಹಾನಂದ ಮಡಕಿ ನಿರೂಪಿಸಿದರು. ಮೀರಾ ಖೇಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.