ADVERTISEMENT

ಬಸವಣ್ಣನವರ ದಾಸೋಹ ತತ್ವ ಪಾಲಿಸಿ: ಜಯಶಾಂತಲಿಂಗ ಸ್ವಾಮೀಜಿ

ಕಾರ್ಮಿಕರಿಗೆ, ಬಡವರಿಗೆ ಆಹಾರ ಧಾನ್ಯದ ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 16:07 IST
Last Updated 7 ಜೂನ್ 2020, 16:07 IST
ಬಸವಕಲ್ಯಾಣ ತಾಲ್ಲೂಕಿನ ಹಿರೇನಾಗಾಂವದಲ್ಲಿ ಶನಿವಾರ ಕೂಲಿ ಕಾರ್ಮಿಕರಿಗೆ ಆಹಾರಧಾನ್ಯವನ್ನು ವಿತರಿಸಲಾಯಿತು
ಬಸವಕಲ್ಯಾಣ ತಾಲ್ಲೂಕಿನ ಹಿರೇನಾಗಾಂವದಲ್ಲಿ ಶನಿವಾರ ಕೂಲಿ ಕಾರ್ಮಿಕರಿಗೆ ಆಹಾರಧಾನ್ಯವನ್ನು ವಿತರಿಸಲಾಯಿತು   

ಬಸವಕಲ್ಯಾಣ: ‘ಬಸವಣ್ಣನವರು ಕಾಯಕ ಮತ್ತು ದಾಸೋಹ ತತ್ವವನ್ನು ಸಾರಿದ್ದಾರೆ. ಉಳ್ಳವರು ಇಲ್ಲದವರಿಗೆ ನೀಡುವ ಅವರ ದಾಸೋಹ ತತ್ವದ ಪಾಲನೆಯಾದರೆ ಜಗತ್ತಿನಲ್ಲಿ ಸುಖ ಶಾಂತಿ ನೆಲೆಸಬಲ್ಲದು’ ಎಂದು ಜಯಶಾಂತಲಿಂಗ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಿರೇನಾಗಾಂವದಲ್ಲಿ ಶನಿವಾರ ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಆಹಾರಧಾನ್ಯದ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

‘ಶರಣರು ಬರೀ ವಚನ ಬರೆದು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದಂತೆಯೇ ಸಾಮಾಜಿಕ ಪರಿವರ್ತನೆಗೆ ಪ್ರಯತ್ನಿಸಿದರು. ಕೆಳ ವರ್ಗದವರನ್ನು ಮೇಲೆತ್ತಲು ಸತತವಾಗಿ ಶ್ರಮಿಸಿದರು. ಮುಖಂಡ ಶರಣು ಸಲಗರ ಕೂಡ ತಾಲ್ಲೂಕಿನಾದ್ಯಂತ 40 ಸಾವಿರಕ್ಕೂ ಹೆಚ್ಚಿನ ಕುಟುಂಬಗಳಿಗೆ ಆಹಾರಧಾನ್ಯ ವಿತರಿಸಿ ಪುಣ್ಯದ ಕಾರ್ಯ ಮಾಡಿದ್ದಾರೆ’ ಎಂದರು.

ADVERTISEMENT

ಬಿಜೆಪಿ ಮುಖಂಡ ಶರಣು ಸಲಗರ, ಪಕ್ಷದ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಹಣಮಂತ ಧನಶೆಟ್ಟಿ, ಪಿಕೆಪಿಎಸ್ ಅಧ್ಯಕ್ಷ ಶಂಕರ ಬಿರಾದಾರ, ಸುಮಿತ್ರಾ, ಗುರುನಾಥ ಮೂಲಗೆ, ಸದಾನಂದ ಪಾಟೀಲ ಮುಡಬಿ. ರತಿಕಾಂತ ಶಿರ್ಶಿವಾಡಿ, ಶಿವಾ ಕಲ್ಲೋಜಿ ಕೊಹಿನೂರ, ಜಗನ್ನಾಥ ಗದ್ಲೇಗಾಂವ್, ಮಹಾದೇವ ಪಾಟೀಲ, ನಾಗರಾಜ ದರ್ಜೆ, ಆಕಾಶ ಹಿರೇಮಠ, ಲೋಕೇಶ, ಅಂಕುಶ ಹಾಗೂ ಸುರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.