ADVERTISEMENT

ಆಹಾರ ಧಾನ್ಯ ವಿತರಣೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 12:47 IST
Last Updated 20 ಜೂನ್ 2021, 12:47 IST
ಬೀದರ್‌ ತಾಲ್ಲೂಕಿನ ವಿಲಾಸಪುರದಲ್ಲಿ ತಹಶೀಲ್ದಾರ್‌ ಗಂಗಾದೇವಿ ಅವರು ಅಂಗವಿಕಲರಿಗೆ ಆಹಾರಧಾನ್ಯ ಕಿಟ್‌ ವಿತರಿಸಿದರು
ಬೀದರ್‌ ತಾಲ್ಲೂಕಿನ ವಿಲಾಸಪುರದಲ್ಲಿ ತಹಶೀಲ್ದಾರ್‌ ಗಂಗಾದೇವಿ ಅವರು ಅಂಗವಿಕಲರಿಗೆ ಆಹಾರಧಾನ್ಯ ಕಿಟ್‌ ವಿತರಿಸಿದರು   

ವಿಲಾಸಪುರ (ಜನವಾಡ): ನೆಹರು ಯುವ ಕೇಂದ್ರ ಹಾಗೂ ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಯುತ್ ಕ್ಲಬ್ ವತಿಯಿಂದ ಬೀದರ್ ತಾಲ್ಲೂಕಿನ ವಿಲಾಸಪುರ ಗ್ರಾಮದಲ್ಲಿ ಅಂಗವಿಕಲರು, ಹಿರಿಯ ನಾಗರಿಕರು ಹಾಗೂ ಬುದ್ಧಿಮಾಂಧ್ಯರಿಗೆ ಕೋವಿಡ್‌ ಲಸಿಕೆ ಹಾಕಿ ಆಹಾರಧಾನ್ಯ ವಿತರಿಸಲಾಯಿತು.

ತಹಶೀಲ್ದಾರ್ ಗಂಗಾದೇವಿ ಅವರು ಆಹಾರಧಾನ್ಯ ವಿತರಿಸಿ ಮಾತನಾಡಿ, ‘ದೇಶದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದೆಂದು 80 ಕೋಟಿ ಬಡವರಿಗೆ ತಲಾ ಉಚಿತ 10 ಕೆ.ಜಿ ಅಕ್ಕಿ ಹಾಗೂ ಒಂದು ಕಾರ್ಡಿಗೆ 2 ಕೆ.ಜಿ ಗೋಧಿ ಉಚಿತವಾಗಿ ವಿತರಿಸುತ್ತಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ವಿವಿಧ ಸಂಘಟನೆಗಳು, ಸಂಘ– ಸಂಸ್ಥೆಗಳು ವಿಪ್ರೊದಂತಹ ದೊಡ್ಡ ಸಂಸ್ಥೆಗಳ ಸಹಕಾರದೊಂದಿಗೆ
ಬಡವರಿಗೆ ದಿನಸಿ ವಸ್ತುಗಳನ್ನು ಮನೆ ಮನೆಗೆ ಉಚಿತವಾಗಿ ಹಂಚುತ್ತಿವೆ’ ಎಂದು ಹೇಳಿದರು.

ADVERTISEMENT

ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಯುತ್ ಕ್ಲಬ್ ಅಧ್ಯಕ್ಷೆ ಮಂಗಲಾ ಮರಕಲೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.