ADVERTISEMENT

ಪತ್ರಿಕಾ ವಿತರಕರಿಗೆ ಆಹಾರಧಾನ್ಯ ಕಿಟ್

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 15:09 IST
Last Updated 6 ಜೂನ್ 2021, 15:09 IST
ಬೀದರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರು ಮನೆ ಮನೆಗೆ ಪತ್ರಿಕೆ ಹಾಕುವವರಿಗೆ ರೋಟರಿ ಕ್ಲಬ್ ಆಫ್ ಬೀದರ್ ವತಿಯಿಂದ ಆಹಾರಧಾನ್ಯದ ಕಿಟ್‌ ನೀಡಿದರು
ಬೀದರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರು ಮನೆ ಮನೆಗೆ ಪತ್ರಿಕೆ ಹಾಕುವವರಿಗೆ ರೋಟರಿ ಕ್ಲಬ್ ಆಫ್ ಬೀದರ್ ವತಿಯಿಂದ ಆಹಾರಧಾನ್ಯದ ಕಿಟ್‌ ನೀಡಿದರು   

ಬೀದರ್‌: ‘ಕೋವಿಡ್‌ನಿಂದಾಗಿ ಅನೇಕ ಜನ ಸಂಕಷ್ಟದಲ್ಲಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲೂ ಪತ್ರಿಕೆ ವಿತರಿಸುತ್ತಿರುವವರ ಸಂಕಷ್ಟಕ್ಕೆ ಸ್ಪಂದಿಸಿ ರೋಟರಿ ಕ್ಲಬ್ ಸಂಸ್ಥೆ ಮಾನವೀಯ ನೆರವು ಒದಗಿಸಿದ್ದು ಶ್ಲಾಘನೀಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹೇಳಿದರು.

ರೋಟರಿ ಕ್ಲಬ್ ಆಫ್ ಬೀದರ್ ವತಿಯಿಂದ ಪತ್ರಿಕಾ ವಿತರಕರಿಗೆ ಆಹಾರ ಧಾನ್ಯದ ಕಿಟ್ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್‌ನ ಅಧ್ಯಕ್ಷ ಹಾವಶೆಟ್ಟಿ ಪಾಟೀಲ ಮಾತನಾಡಿ, ‘‌ಸಂಕಷ್ಟದಲ್ಲಿರುವವರಿಗೆರೋಟರಿ ಕ್ಲಬ್ ಆಹಾರ ಧಾನ್ಯ, ಊಟದ ಪೊಟ್ಟಣ, ಬಟ್ಟೆ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಕೊಡುತ್ತಿದೆ’ ಎಂದು ತಿಳಿಸಿದರು.

ADVERTISEMENT

ಕೆಎಸ್ಐಐಡಿಸಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಕ್ಲಬ್‌ನ ಕಾರ್ಯದರ್ಶಿ ರಂಜೀತ ಪಾಟೀಲ, ಪದಾಧಿಕಾರಿಗಳಾದ ರವಿ ಮೂಲಗೆ, ಅನಿಲಕುಮಾರ ಔರಾದೆ, ದಾದಾರಾವ್ ಕೋಳೆಕರ್, ಚಂದ್ರಕಾಂತ ಕಾಡಾದಿ, ನಾಗೇಂದ್ರ ನಿಟ್ಟೂರೆ, ವೀರಶೆಟ್ಟಿ ಪಾಟೀಲ, ರಾಜಾರಾಮ ಚಿಟ್ಟಾ, ದತ್ತು ಪಾಟೀಲ, ಅನಿಲ ಮಸೂದಿ, ಶಿವಕುಮಾರ ಪಾಟೀಲ, ಅಮರನಾಥ ಡೊಳ್ಳಿ, ಶ್ರೀನಿವಾಸ ಸಾಳೆ, ಗೋಪಾಲ ಲೋಯಾ, ಡಾ.ವಸಂತ ಪಾಟೀಲ ಇದ್ದರು.

ಸೋಮಶೇಖರ ಪಾಟೀಲ ಸ್ವಾಗತಿಸಿದರು. ಸುರೇಶ ಚನಶೆಟ್ಟಿ ನಿರೂಪಿಸಿದರು. ಪ್ರಕಾಶ ಟೊಣ್ಣೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.