ADVERTISEMENT

ಖೇಣಿ ಅಭಿಮಾನಿಗಳಿಂದ ಉಚಿತ ಔಷಧಿ

​ಪ್ರಜಾವಾಣಿ ವಾರ್ತೆ
Published 6 ಮೇ 2021, 4:35 IST
Last Updated 6 ಮೇ 2021, 4:35 IST
ಕಮಠಾಣದಲ್ಲಿ ಹೋಂ ಕ್ವಾರಂಟೈನ್ ಆಗಿ ಕೋವಿಡ್‍ಗೆ ಚಿಕಿತ್ಸೆ ಪಡೆಯುತ್ತಿರುವವರ ಕುಟುಂಬಸ್ಥರಿಗೆ ಅಶೋಕ ಖೇಣಿ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಔಷಧಿ ನೀಡಿದರು
ಕಮಠಾಣದಲ್ಲಿ ಹೋಂ ಕ್ವಾರಂಟೈನ್ ಆಗಿ ಕೋವಿಡ್‍ಗೆ ಚಿಕಿತ್ಸೆ ಪಡೆಯುತ್ತಿರುವವರ ಕುಟುಂಬಸ್ಥರಿಗೆ ಅಶೋಕ ಖೇಣಿ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಔಷಧಿ ನೀಡಿದರು   

ಬೀದರ್: ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ಕೋವಿಡ್ ಸೋಂಕಿಗೆ ಹೋಂ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಅಶೋಕ ಖೇಣಿ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಉಚಿತ ಔಷಧಿ ವಿತರಿಸಿದರು.

ಮೊಬೈಲ್ ಸಂಖ್ಯೆಗೆ ಕರೆ ಮಾಡಿದವರ ಮನೆ ಬಾಗಿಲಿಗೇ ಹೋಗಿ ಔಷಧಿ ಕೊಟ್ಟರು.

‘ಕೋವಿಡ್ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಅನೇಕರು ಸಾವಿಗೀಡಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಮಾಜಿ ಶಾಸಕ ಅಶೋಕ ಖೇಣಿ ಅವರ ಹೆಸರಲ್ಲಿಯುವಕರ ತಂಡವೊಂದು ಸೋಂಕಿತರ ಸಹಾಯಕ್ಕೆ ಮುಂದಾಗಿರುವುದು ಶ್ಲಾಘನೀಯ’ ಎಂದು ಶಿವಪುತ್ರಪ್ಪ ಕುಂಬಾರ ಹೇಳಿದರು.

ADVERTISEMENT

‘ಕೋವಿಡ್ ಪ್ರಯುಕ್ತ ವಿಧಿಸಲಾಗಿದ್ದ ಲಾಕ್‍ಡೌನ್ ಸಂದರ್ಭದಲ್ಲಿ ಅಶೋಕ ಖೇಣಿ ಅವರು ನಿರ್ಗತಿಕರಿಗೆ ಆಹಾರ ಕಿಟ್ ಹಾಗೂ ತರಕಾರಿ ವಿತರಿಸಿದ್ದರು’ ಎಂದು ಸ್ಮರಿಸಿದರು.

ಅಶೋಕ ಖೇಣಿ ಅಭಿಮಾನಿಗಳ ಸಂಘದಸದಸ್ಯರಾದ ರಮೇಶ ಹೌದಖಾನಿ, ಪ್ರಶಾಂತ ಜೈನ್,ಓಂಕಾರ ಕೊಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.