ADVERTISEMENT

ಜನವಾಡ: ಎಲ್ಲೆಡೆ ವಿಘ್ನ ನಿವಾರಕನ ಆರಾಧನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 16:16 IST
Last Updated 8 ಸೆಪ್ಟೆಂಬರ್ 2024, 16:16 IST
ಬೀದರ್ ತಾಲ್ಲೂಕಿನ ಜನವಾಡದಲ್ಲಿ ‘ಜನವಾಡ ಕಾ ರಾಜಾ’ ಗಣೇಶ ಮಂಡಳಿಯವರು ಪ್ರತಿಷ್ಠಾಪಿಸಿದ ಗೌರಿಸುತನ ಮೂರ್ತಿ
ಬೀದರ್ ತಾಲ್ಲೂಕಿನ ಜನವಾಡದಲ್ಲಿ ‘ಜನವಾಡ ಕಾ ರಾಜಾ’ ಗಣೇಶ ಮಂಡಳಿಯವರು ಪ್ರತಿಷ್ಠಾಪಿಸಿದ ಗೌರಿಸುತನ ಮೂರ್ತಿ   

ಜನವಾಡ: ಬೀದರ್ ತಾಲ್ಲೂಕಿನಾದ್ಯಂತ ವಿಘ್ನ ನಿವಾರಕನ ಆರಾಧನೆ ಸಡಗರ ಸಂಭ್ರಮದಿಂದ ಸಾಗಿದೆ.

ತಾಲ್ಲೂಕಿನ ವಿವಿಧೆಡೆ ಸಾರ್ವಜನಿಕರು ಶನಿವಾರ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ಸಾರ್ವಜನಿಕ ಸ್ಥಳಗಳು ಹಾಗೂ ಮನೆಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಜನವಾಡ, ಮಾಳೆಗಾಂವ್, ಮನ್ನಳ್ಳಿ, ಬಗದಲ್, ಕಮಠಾಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಆಕರ್ಷಕ ಮಂಟಪ ನಿರ್ಮಿಸಿ, ವಿಭಿನ್ನ ಭಂಗಿಗಳ ಲಂಬೋದರನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ADVERTISEMENT

ಜನವಾಡದಲ್ಲಿ ‘ಜನವಾಡ ಕಾ ರಾಜಾ’, ‘ದಿ ಗ್ರೇಟ್ ಮರಾಠ’, ಯುವ ಗಣೇಶ ಮಂಡಳ, ಶಿವಶಕ್ತಿ ಗಣೇಶ ಮಂಡಳ, ಭವಾನಿ ಗಣೇಶ ಮಂಡಳ, ಶಿವಸೇನಾ ಗಣೇಶ ಮಂಡಳಗಳ ಗಣೇಶ ಮಂಟಪಗಳು ಭಕ್ತರನ್ನು ಪೈಪೋಟಿಗೆ ಬಿದ್ದು ಸೆಳೆಯುವಂತಿವೆ.

ಮಂಟಪಗಳಿಗೆ ವಿದ್ಯುತ್ ದೀಪ, ಹೂವು ಹಾಗೂ ಇತರ ವಸ್ತುಗಳಿಂದ ಅಲಂಕಾರ ಮಾಡಲಾಗಿದೆ. ಏಕದಂತನಿಗೆ ಬೆಳಿಗ್ಗೆ ಹಾಗೂ ಸಂಜೆ ಪೂಜೆ, ಪ್ರಸಾದ ವಿತರಣೆ ನಡೆಯುತ್ತಿದೆ.

ಬಗೆಬಗೆಯ ಅವತಾರಗಳಲ್ಲಿ ಇರುವ ಗಣೇಶ ಮೂರ್ತಿಗಳ ವೀಕ್ಷಣೆಗೆ ಭಕ್ತರು ಭೇಟಿ ನೀಡುತ್ತಿದ್ದಾರೆ. ಗಣೇಶನಿಗೆ ಭಕ್ತಿ ಸಮರ್ಪಿಸುತ್ತಿದ್ದಾರೆ.

ಜನವಾಡದಲ್ಲಿ ಕೆಲ ಮಂಡಳಿಗಳಿಂದ ಐದು ದಿನ, ಇನ್ನು ಕೆಲ ಮಂಡಳಿಗಳಿಂದ ಏಳು ದಿನ ಗಣೇಶ ಉತ್ಸವ ನಡೆಯಲಿದೆ ಎಂದು ಗ್ರಾಮದ ಜನವಾಡ ಕಾ ರಾಜಾ ಗಣೇಶ ಮಂಡಳದ ಪಂಕಜ್ ದೇವಕತೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.